ಬೆಳಗಾವಿ: ಸಂಭಾಜಿ ಪಾಟೀಲ್ ಧೀಮಂತ ನಾಯಕ. ಬೆಳಗಾವಿ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಿದೆ. ಒಬ್ಬ ಒಳ್ಳೆಯ ನಾಯಕನನ್ನು ಬೆಳಗಾವಿ ಜಿಲ್ಲೆ ಕಳೆದುಕೊಂಡಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಿನ್ನೆ ರಾತ್ರಿ ನಿಧನರಾಗಿದ್ದ ಬೆಳಗಾವಿ ಮಾಜಿ ಶಾಸಕ ಹಾಗೂ ಮಾಜಿ ಮೇಯರ್ ಸಂಭಾಜಿ ಪಾಟೀಲ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಸಂಭಾಜಿ ಬೆಳಗಾವಿ ಅಭಿವೃದ್ಧಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಜೊತೆಗೆ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. ಅವರ ಮನೆಯವರಿಗೆ ದುಃಖ ಬರಿಸುವ ಶಕ್ತಿ ಭಗವಂತ ನೀಡಲಿ ಎಂದರು.