ETV Bharat / state

ಬೆಳಗಾವಿ ಪೌರಕಾರ್ಮಿಕರ ನೌಕರಿ ಕಾಯಮಾತಿ 15 ವರ್ಷಗಳಿಂದ ನನೆಗುದಿಗೆ.. ಈ ಅಧಿವೇಶನದಲ್ಲಾದರೂ ಈಡೇರುತ್ತಾ..? - ಪೌರ ಕಾರ್ಮಿಕರ ಕಾಯಮಾತಿ ವಿಚಾರ

ಬೆಳಗಾವಿ ಅಧಿವೇಶನದ ವೇಳೆ 359 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ಮುಖ್ಯಮಂತ್ರಿಗಳ ಕೈಯಿಂದ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿ ನಿತೇಶ್​ ಪಾಟೀಲ್ ಭರವಸೆ ನೀಡಿದ್ದಾರೆ.

Belgaum Corporation
ಬೆಳಗಾವಿ ಮಹಾನಗರ ಪಾಲಿಕೆ
author img

By ETV Bharat Karnataka Team

Published : Nov 10, 2023, 4:09 PM IST

Updated : Nov 10, 2023, 10:49 PM IST

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಳಗಾವಿ:ಬೆಳಗಾವಿ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ತಮ್ಮ ಜೀವನವನ್ನು ಮುಡಿಪಾಗಿಡುವ ಪೌರಕಾರ್ಮಿಕರಿಗೆ ಇನ್ನೂ ನೌಕರಿ ಕಾಯಮಾತಿ ಆದೇಶ ಸಿಕ್ಕಿಲ್ಲ. 2008ರಿಂದ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಸರ್ಕಾರದ ಆದೇಶವಿದ್ದರೂ ನೇಮಕ ಮಾಡದೇ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ಇನ್ನು ಅಧಿವೇಶನದೊಳಗೆ ಕಾರ್ಮಿಕರ ನೌಕರಿ ಕಾಯಂಗೊಳಿಸುವ ವಿಶ್ವಾಸವನ್ನು ಜಿಲ್ಲಾಧಿಕಾರಿ ಇಂದು ವ್ಯಕ್ತಪಡಿಸಿದ್ದು, ಪೌರ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದೆ‌.

ಹೌದು.. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕಾಯಮಾತಿ ವಿಚಾರ ಕಳೆದ 15 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 20 ವರ್ಷಕ್ಕೂ ಹೆಚ್ಚು ಕಾಲ ನಗರವನ್ನು ಸ್ವಚ್ಛಗೊಳಿಸುವ ಕಾಯಕ ಮಾಡುವ ಪೌರ ಕಾರ್ಮಿಕರು ಇಂದು ಆಗುತ್ತೆ, ನಾಳೆ ಆಗುತ್ತೆ ಎಂದು ಆಸೆಗಣ್ಣಿನಿಂದ ಕಾಯುತ್ತಾ ಕುಳಿತಿದ್ದಾರೆ.

2016ರಲ್ಲಿ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಕಾಯಮಾತಿ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಆದೇಶ ನೀಡಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತ ಮತ್ತು ಪಾಲಿಕೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಈಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಪೌರಕಾರ್ಮಿಕರ ಬಹುದಿನಗಳ ಕನಸು ನನಸು ಮಾಡುವತ್ತ ಹೆಜ್ಜೆ ಇಟ್ಟಿದೆ.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, ಪೌರ ಕಾರ್ಮಿಕ ಕಾಯಮಾತಿಯಲ್ಲಿ ವಿಳಂಬದ ಪ್ರಶ್ನೆ ಉದ್ಭವಿಸುವುದಿಲ್ಲ. ಈಗಾಗಲೇ ಎಲ್ಲ ಪ್ರಕ್ರಿಯೆ ಸಂಪೂರ್ಣವಾಗಿದೆ‌. ಆದರೆ, 23 ಜನರ ವಯಸ್ಸಿನ ದಾಖಲಾತಿ ಕುರಿತು ಗೊಂದಲವಿತ್ತು. ಹಾಗಾಗಿ, ಸರ್ಕಾರ ಕೇಳಿದ್ದ ಸ್ಪಷ್ಟೀಕರಣ ಕುರಿತು ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇನೆ. ಅದಾದ ಬಳಿಕ ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

358 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಸಿದ್ಧ:ಇನ್ನು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಮಾತನಾಡಿ, ಈಗಾಗಲೇ ಪೌರಕಾರ್ಮಿಕರ ನೇಮಕಾತಿ ಕಾಯಂ ಮಾಡುವ ಬಗ್ಗೆ ಸಮಿತಿ ಸಭೆ ಮಾಡಿದ್ದೇವೆ. 204 ಪೌರ ಕಾರ್ಮಿಕರ ತಾತ್ಕಾಲಿಕ ಪಟ್ಟಿ ಸಿದ್ಧವಾಗಿದೆ. ಇನ್ನು 155 ಪೌರಕಾರ್ಮಿಕರ ನೇಮಕಾತಿ ಲಿಸ್ಟ್​ ಕಾರ್ಮಿಕ ಇಲಾಖೆಯಲ್ಲಿ ದಾಖಲಾತಿ ಸಮಸ್ಯೆಗಳಿಂದ ಬಾಕಿ ಉಳಿದಿದೆ.

ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದು, ಪತ್ರ ಕೂಡ ಬಂದಿದೆ. ಇನ್ನು ಇದೇ 18ರಂದು ಸಮಿತಿ ಸಭೆ ಕರೆದಿದ್ದೇವೆ. ಅದರೊಳಗೆ ಪಾಲಿಕೆಯಿಂದ ದಾಖಲೆಗಳು ನೀಡಿದರೆ, ಅಧಿವೇಶನದ ಸಂದರ್ಭದಲ್ಲಿ ಎರಡೂ ಸೇರಿಸಿ 359 ಪೌರ ಕಾರ್ಮಿಕರ ನೇಮಕಾತಿ ಆದೇಶ ಪತ್ರಗಳನ್ನು ಮುಖ್ಯಮಂತ್ರಿಗಳ ಕೈಯಿಂದ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಒಟ್ಟಿನಲ್ಲಿ ಬೆಳಗಾವಿ ನಗರವನ್ನು ಸ್ವಚ್ಛವಾಗಿಡಲು ಹಗಲಿರಳು ಶ್ರಮಿಸಿ ತಮ್ಮ ಜೀವನ ಮುಡಿಪಾಗಿಡುವ ಪೌರಕಾರ್ಮಿಕರಿಗೆ ನೌಕರಿ ಕಾಯಮಾತಿ ಆದೇಶ ಬೇಗ ಸಿಗುವಂತಾಗಬೇಕು. ಪೌರಕಾರ್ಮಿಕರು ಸಂತಸದಿಂದ ನಗರದಲ್ಲಿ ಕೆಲಸ ನಿರ್ವಹಿಸಬೇಕು ಎನ್ನುವುದು ಜನರ ಆಶಯವಾಗಿದೆ.

ಇದನ್ನೂಓದಿ:ಈಡೇರದ ಉತ್ತರ ಕನ್ನಡಿಗರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ

Last Updated : Nov 10, 2023, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.