ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಪಾಲಿಕೆಯ ಮಾಜಿ ಸದಸ್ಯರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಾಜಿ ಸದಸ್ಯರು, ನಂತರ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.
2014ರಲ್ಲಿ ಚುನಾವಣೆ ನಡೆದಿದ್ದ ಪಾಲಿಕೆಯ ಐದು ವರ್ಷದ ಅವಧಿ 2019 ಮಾರ್ಚ್ 9ಕ್ಕೆ ಮುಗಿದಿದೆ. ಕೆಎಂಸಿ ಕಾಯ್ದೆ ಅನ್ವಯ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕಿತ್ತು. ಕಾರಣಾಂತರಗಳಿಂದ ಚುನಾವಣೆ ನಡೆಸಿಲ್ಲವಾದ್ದರಿಂದ ಕಳೆದ 10 ತಿಂಗಳಿಂದ ಪಾಲಿಕೆಗೆ ಸದಸ್ಯರಿಲ್ಲ. ಹೀಗಾಗಿ ಮೂಲ ಸೌಕರ್ಯ ಸೇರಿದಂತೆ ನಗರವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಹೀಗಾಗಿ ಆದಷ್ಟು ಬೇಗ ಕಾನೂನು ತೊಡಕು ನಿವಾರಿಸಿ ತಕ್ಷಣವೇ ಚುನಾವಣೆ ನಡೆಸಲು ಕ್ರಮ ವಹಿಸುವಂತೆ ಮನವಿ ಮಾಡಿಕೊಂಡರು.