ETV Bharat / state

ಬೆಳಗಾವಿ ಲೋಕಸಭೆ ‌ಉಪಚುನಾವಣೆ: ರಮೇಶ್ ಜಾರಕಿಹೊಳಿ‌ಗೆ ಕೋಕ್, ಶೆಟ್ಟರ್ ಹೆಗಲಿಗೆ ಚುನಾವಣೆ ಉಸ್ತುವಾರಿ ಹೊಣೆ

author img

By

Published : Mar 19, 2021, 12:31 PM IST

ಕೇಂದ್ರ ಸಚಿವ ಸುರೇಶ್​ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ‌ಕ್ಷೇತ್ರಕ್ಕೆ ಏ.17ಕ್ಕೆ ಮತದಾನ ನಡೆಯಲಿದೆ. ಈ ಮೊದಲು ರಮೇಶ್ ಜಾರಕಿಹೊಳಿಯವರಿಗೆ ಚುನಾವಣೆಯ ಉಸ್ತುವರಿ ವಹಿಸಲಾಗಿತ್ತು. ಅವರು ರಾಜೀನಾಮೆ ನೀಡಿದ ಬೆನ್ನಲ್ಲೆ ಉಪಚುನಾವಣೆ ಹೊಣೆಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡಲು ಬಿಜೆಪಿ ಚಿಂತನೆಯಲ್ಲಿ ತೊಡಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ಜಗದೀಶ್ ಶೆಟ್ಟರ್
Jagadish Shettar

ಬೆಳಗಾವಿ: ಬೆಳಗಾವಿ ಕ್ಷೇತ್ರದ ಲೋಕಸಭೆ ಉಪಚುನಾವಣೆ ಹೊಸ್ತಿಲಲ್ಲಿ ರಮೇಶ್ ಜಾರಕಿಹೊಳಿ‌ಯವರ ಸಿಡಿ‌ ಬಹಿರಂಗಗೊಂಡು ರಾಜೀನಾಮೆ ನೀಡಿದ್ದಾರೆ. ಚುನಾವಣೆ ಘೋಷಣೆ ಮುನ್ನವೇ ರಮೇಶ್ ಅವರಿಗೆ ಉಸ್ತುವಾರಿ ಹೊಣೆ ನೀಡಲಾಗಿತ್ತು. ಇವರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಹಾಗೂ ಉಮೇಶ್ ಕತ್ತಿಗೆ ಉಸ್ತುವಾರಿ ನೀಡಲಾಗಿತ್ತು. ಆದರೆ, ಇದೀಗ ಬೆಳಗಾವಿ ಕ್ಷೇತ್ರದ ಉಪಚುನಾವಣೆ ಹೊಣೆಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡಲು ಬಿಜೆಪಿ ಚಿಂತನೆಯಲ್ಲಿ ತೊಡಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ಕೇಂದ್ರ ಸಚಿವ ಸುರೇಶ್​ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ‌ಕ್ಷೇತ್ರಕ್ಕೆ ಏ.17ಕ್ಕೆ ಮತದಾನ ನಡೆಯಲಿದೆ. ಹೀಗಾಗಿ ಉಸ್ತುವಾರಿ ಹೊಣೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೆಗಲೇರುವ ಸಾಧ್ಯತೆ ‌ಇದೆ. ಶೆಟ್ಟರ್ ಜೊತೆಗೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿ ಅಥವಾ ಸಿಎಂ ಪುತ್ರ ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿದೆ. ಶೀಘ್ರವೇ ಸಭೆ ನಡೆಸಿ ಯಾರಿಗೆ ಉಸ್ತುವಾರಿ ನೀಡಬೇಕು ಎಂಬುವುದರ ಬಗ್ಗೆ ಬಿಜೆಪಿ ನಿರ್ಧರಿಸಲಿದೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳಲು ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಡಿಸಿಎಂ ಲಕ್ಷ್ಮಣ ‌ಸವದಿಗೆ ಉಸ್ತುವಾರಿ ನೀಡದಂತೆ ಜಾರಕಿಹೊಳಿ‌ ಸಹೋದರರು ಪಟ್ಟು ಹಿಡಿದ್ದಾರೆ. ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್ ಇಲ್ಲವೆ ಉಮೇಶ್ ಕತ್ತಿಗೆ ಉಸ್ತುವಾರಿ ಹೊಣೆ ನೀಡಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಜಾರಕಿಹೊಳಿ‌ ಸಹೋದರರು ಬಿಜೆಪಿ ಅಧ್ಯಕ್ಷರ ಎದುರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಓದಿ: ಸಿಡಿ ಪ್ರಕರಣ: ಯುವತಿ ಸೇರಿದಂತೆ ಮೂವರಿಗೆ ನೋಟಿಸ್ ನೀಡಿದ ಎಸ್ಐಟಿ

ಆದರೆ ಜಿಲ್ಲೆಯವರನ್ನು ಬಿಟ್ಟು ನೆರೆಯ ಧಾರವಾಡದ ಜಗದೀಶ್ ಶೆಟ್ಟರ್ ಅವರಿಗೆ ಚುನಾವಣೆ ‌ಉಸ್ತುವಾರಿ ನೀಡುವ ಮತ್ತು ರಮೇಶ್ ಅವರಿಗೆ ಬಿಜೆಪಿ ರಾಜ್ಯ ಘಟಕ ಉಸ್ತುವಾರಿ ಸ್ಥಾನಕ್ಕೆ ಕೋಕ್ ನೀಡಲು ಚಿಂತನೆಯಲ್ಲಿ ತೊಡಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.