ಬೆಳಗಾವಿ: ಬೈಕ್‍ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ ಭಾಗ್ಯ ನಗರದಲ್ಲಿ ನಡೆದಿದೆ.
ತನಯ್ ಹುಯಿಲಗೋಳ (17) ಮೃತ ದುರ್ದೈವಿ. ಬೈಕ್ ಮೇಲೆ ಹೋಗುತ್ತಿದ್ದ ಸಮಯದಲ್ಲಿ ಭಾಗ್ಯ ನಗರ 3ನೇ ಕ್ರಾಸ್ ಬಳಿ ಈತನ ಬೈಕ್‍ಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ತನಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈತ ಬೆಳಗಾವಿಯ ಪ್ರಸಿದ್ಧ ಚಾರ್ಟಡ್ ಅಕೌಂಟೆಂಟ್ ಮನೋಜ ಹುಯಿಲಗೋಳ ಅವರ ಏಕೈಕ ಪುತ್ರನಾಗಿದ್ದು, ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಬೈಕ್‍ಗೆ ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ದ್ವಿಚಕ್ರ ವಾಹನ ಸವಾರ ಸಾವು