ETV Bharat / state

ಪಶ್ಚಿಮ ಶಿಕ್ಷಕರ ಕ್ಷೇತ್ರ: ಮತ್ತೆ ಗೆಲುವಿನ ನಗೆ ಬೀರಿದ ಬಸವರಾಜ್ ಹೊರಟ್ಟಿ.. ಘೋಷಣೆಯಷ್ಟೇ ಬಾಕಿ - council election results

ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಮತ್ತೊಮ್ಮೆ ಬಸವರಾಜ್ ಹೊರಟ್ಟಿ ಗೆಲುವಿನ ನಗೆ ಬೀರಿದ್ದಾರೆ.

Basavaraj horatti won in Western Teachers Constituency Council Election
ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತ್ತೆ ಗೆಲುವಿನ ನಗೆ ಬೀರಿದ ಬಸವರಾಜ್ ಹೊರಟ್ಟಿ
author img

By

Published : Jun 15, 2022, 12:46 PM IST

ಬೆಳಗಾವಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಮತ್ತೊಮ್ಮೆ ಬಸವರಾಜ್ ಹೊರಟ್ಟಿ ಗೆದ್ದು ಬೀಗಿದ್ದಾರೆ. 7,501 ಮತಗಳ ಕೋಟಾ ತಲುಪಿದ ಹೊರಟ್ಟಿ 8ನೇ ಬಾರಿಗೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಬಸವರಾಜ್ ಹೊರಟ್ಟಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​​ನ ಬಸವರಾಜ್ ಗುರಿಕಾರ ಹಾಗೂ ಜೆಡಿಎಸ್‌ನ ಶ್ರೀಶೈಲ ಗಿಡದಿನ್ನಿ ಮುಖಭಂಗ ಅನುಭವಿಸಿದ್ದಾರೆ. ಆದರೆ, ಹೆಚ್ಚಿನ ತಿರಸ್ಕಾರಗೊಂಡ ಮತಗಳಿಂದ ಹೊರಟ್ಟಿಯವರ ಲೀಡ್ ಪ್ರಮಾಣ ಕುಸಿತ ಕಂಡಿದೆ. ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿಗೆ ಚಲಾವಣೆಗೊಂಡಿದ್ದವು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ : ಮಮತಾ ನೇತೃತ್ವದ ಪ್ರತಿಪಕ್ಷಳ ಸಭೆಗೆ ಒಗ್ಗಟ್ಟಿನ ಕೊರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.