ETV Bharat / state

ಅಕ್ಟೋಬರ್ 1ರಿಂದ ಮಕ್ಕಳ ಜೊತೆಗೆ ಧರಣಿ ಕೂರುವೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ - ಮಕ್ಕಳ ಜೊತೆಗೆ ಧರಣಿ

ಮೀಸಲಾತಿ ವಿಚಾರವಾಗಿ ಸರ್ಕಾರ ಸಿಹಿಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ ಮಾಡುತ್ತೇವೆ. ಇಲ್ಲವಾದರೆ ಮತ್ತೆ ಹೋರಾಟ ಮುಂದುವರಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Basavajayamrityunjaya Swamiji
ಬಸವಜಯ ಮೃತ್ಯುಂಜಯ ಸ್ವಾಮೀಜಿ
author img

By

Published : Sep 24, 2021, 6:11 PM IST

ಬೆಳಗಾವಿ: ಪಂಚಮಸಾಲಿ ‌ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ‌ಆಗ್ರಹಿಸಿ ಅಕ್ಟೋಬರ್ 1 ರಿಂದ ಸಮಾಜದ ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ಧರಣಿ ನಡೆಸುವುದಾಗಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಪಂಚಮಸಾಲಿ ಹೋರಾಟಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೂ, ಅಕ್ಟೋಬರ್ 1 ರಿಂದ ಮಕ್ಕಳ ಜೊತೆಗೆ ಧರಣಿ ಮಾಡುತ್ತೇವೆ. ನಾನು ಮಠ ಬಿಟ್ಟು 30 ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಸಮಾಜಕ್ಕೆ ಒಳ್ಳೆಯದಾಗಬೇಕೆಂದು ಹೋರಾಟ ನಡೆಸುತ್ತಿದ್ದೇನೆ ಎಂದರು.

ಆದರೆ, ನಮ್ಮದೇ ಸಮಾಜದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಅವರೆಲ್ಲರೂ ನಮ್ಮವರೇ ಎಂದು ನಾವು ಭಾವಿಸಿದ್ದೇವೆ. ಯತ್ನಾಳ್​ ಗೌಡರ ಮೇಲೆ ಸಿಟ್ಟು ಇದ್ರೆ ಅವರ ವಿರುದ್ಧ ಸ್ಪರ್ಧೆ ಮಾಡಿ ಗೆದ್ದು ಬನ್ನಿ. ಕಾಶಪ್ಪನವರ ಮೇಲೆ ಸಿಟ್ಟಿದ್ರೆ ಅವರನ್ನು ಸ್ಪರ್ಧೆ ಮಾಡಿ ಗೆದ್ದು ಬನ್ನಿ. ಸಮಾಜಕ್ಕಾಗಿ ನಾವೆಲ್ಲಾ ಹೋರಾಟ ಮಾಡುತ್ತಿದ್ದೇವೆ.

ಕೆಲವು ಅತೃಪ್ತ ಆತ್ಮಗಳು ಇವೆ. ರಾಜಕೀಯ ಏಳಿಗೆ ಸಹಿಸದವರು ಕೆಲವರಿದ್ದಾರೆ. ಸ್ವಾಮೀಜಿಗಳ ಏಳಿಗೆ ಸಹಿಸದೇ ಇರೋರು ಸಹ ಇದ್ದಾರೆ. ನಾನು ಹೋರಾಟ ಮಾಡಬಾರದು ಎಂದು ಕೆಲವರ ಹೇಳುತ್ತಿದ್ದಾರೆ. ನನ್ನ ಹೋರಾಟದಲ್ಲಿ ಸ್ವಾರ್ಥವಿದ್ದರೆ ಇಂದೇ ನಾನು ಹೋರಾಟ ಕೈಬಿಡುತ್ತೇನೆ. ಈ ಹಸಿರು ಶಾಲು ನಿಮ್ಮ ಕೊರಳಿಗೆ ಹಾಕುತ್ತೇನೆ. ಮೀಸಲಾತಿಗೆ ಹೋರಾಟ ಮಾಡುವವರಿಗೆ ನೇತೃತ್ವವಹಿಸಿ ಕೊಡುವೆ. ಯತ್ನಾಳ, ಕಾಶಪ್ಪನವರ್ ಹೋರಾಟ ಮಾಡಬಾರದು ಎನ್ನುತ್ತೀರಿ. ನೀವೂ ಹೋರಾಟ ಮಾಡಲ್ಲ, ಮಾಡೋವರಿಗೆ ಮಾಡಬೇಡಿ ಅಂತೀರಾ? ಎಂದು ಆಕ್ರೋಶ ‌ವ್ಯಕ್ತಪಡಿಸಿದರು.

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಸರ್ಕಾರಕ್ಕೆ ನೀಡಿದ ಗಡುವು ಮುಗಿದಿದೆ. ಈಗ ಏನೇ ಇದ್ದರೂ ಸರ್ಕಾರ ಕ್ಯಾಬಿನೆಟ್ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು ಎಂದರು.

ಆಯೋಗದ ವರದಿ ಪಡೆದು ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದೊಂದೇ ಬಾಕಿ ಇದೆ. ಈ ವಿಚಾರವಾಗಿ ನಿನ್ನೆ ಬೆಂಗಳೂರು ಅಧಿವೇಶನದಲ್ಲಿ ಸಮಾಜದ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರು ಧ್ವನಿ ಎತ್ತಿದ್ದಾರೆ‌. 2ಎ ಮೀಸಲಾತಿ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ‌. ಸಮಾವೇಶದಲ್ಲಿ ಚರ್ಚೆ ಮಾಡಿ ಹೋರಾಟದ ಮುಂದಿನ ರೂಪರೇಷೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳುವ ಭರವಸೆ ನಮಗೆ ಇದೆ. ಮೀಸಲಾತಿ ವಿಚಾರವಾಗಿ ಸರ್ಕಾರ ಸಿಹಿ ಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ ಮಾಡುತ್ತೇವೆ. ಇಲ್ಲವಾದರೆ ಮತ್ತೆ ಹೋರಾಟ ಮುಂದುವರಿಸುತ್ತೇವೆ ಎಂದರು.

ಪಂಚಮಸಾಲಿ ಕಹಳೆ: ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಗಾಂಧಿಭವನದವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ತೆರೆದ ವಾಹನದಲ್ಲಿ ಬಸವ ಸ್ವಾಮೀಜಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಾಥ್ ನೀಡಿದರು. ವಾದ್ಯಮೇಳಗಳು ಮೆರವಣಿಗೆಗೆ ರಂಗು ತಂದವು.

ಇದನ್ನೂ ಓದಿ: ಕಾನೂನು ರೂಪಿಸುವಾಗ ವಿಧಾನ ಮಂಡಲದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿಲ್ಲ: ಓಂ ಬಿರ್ಲಾ ಕಳವಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.