ಬೆಳಗಾವಿ: ರಕ್ತ ಚೆಲ್ಲುತ್ತೇವೆ, ಮೀಸಲಾತಿ ಪಡೆಯುತ್ತೇವೆ ಎಂಬ ಅಭಿಯಾನದಡಿ ಲಿಂಗಾಯತ ಒಬಿಸಿ ಹಾಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಆಗ್ರಹಿಸಿ ರಾಜ್ಯಾದ್ಯಂತ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ರೈತ ದಿನಾಚರಣೆ ಪ್ರಯುಕ್ತ ನನ್ನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಭಕ್ತಾದಿಗಳು ಈ ರೀತಿ ಆಚರಣೆ ಮಾಡದೇ ಅದೇ ದಿನ ಪಾದಯಾತ್ರೆ ಮಾಡಲು ಕರೆ ಕೊಡಲಾಗಿತ್ತು.
ಓದಿ: ಸಿಎಂ ಕೊಟ್ಟ ಭರವಸೆ ಈಡೇರಿಸಲಿ: ಕೂಡಲಸಂಗಮ ಶ್ರೀ ಒತ್ತಾಯ
ಆದರೀಗ ಈ ಪಾದಯಾತ್ರೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದ್ದು, ಜನವರಿ 14ಕ್ಕೆ ಮುಂದೂಡಲಾಗಿದೆ. ಹೀಗಾಗಿ ಆಡಂಬರ, ಅದ್ಧೂರಿ ಮೆರವಣಿಗೆಯ ಜನ್ಮದಿನವನ್ನು ರದ್ದುಪಡಿಸಿ, ರಕ್ತ ಕೊಡುತ್ತೇವೆ, ಮೀಸಲಾತಿಯನ್ನು ಪಡೆಯುತ್ತೇವೆ ಎಂದು ಸರ್ಕಾರವನ್ನು ಪ್ರತಿಭಟಿಸುವ ದಿನವನ್ನಾಗಿ ಆಚರಣೆ ಮಾಡಬೇಕು ಎಂದರು.
ಸಂಭ್ರಮ ಪಡುವ ದಿನವನ್ನು ನಮ್ಮ ಸಮುದಾಯದ ಮಕ್ಕಳು ಮೀಸಲಾತಿ ಪಡೆಯವ ಸಲುವಾಗಿ ಪ್ರತಿಭಟನೆ ಮಾಡಬೇಕು. ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರ ಮಾಡಿ ಜೀವ ಉಳಿಸುವ ಅಭಿಯಾನ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದ ಶ್ರೀಗಳು ತಿಳಿಸಿದರು.