ಬೆಳಗಾವಿ: ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಹಾಗೂ ನಿಷೇಧಿತ ಪಿಎಫ್ಐನ 6 ಮಂದಿ ಕಾರ್ಯಕರ್ತರಿಗೆ ಒಂದು ವಾರದ ಬಳಿಕ ಜಾಮೀನು ಸಿಕ್ಕಿದೆ.ಒಟ್ಟು 7 ಜನರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾಡಿ ಆದೇಶ ಹೊರಡಿಸಿದ್ದಾರೆ.
ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ನಿಷೇಧಿತ ಪಿಎಫ್ಐ ಕಾರ್ಯಕರ್ತರಾದ ಝಕೀವುಲ್ಲಾ ಫೈಜಿ, ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಸಮೀವುಲ್ಲಾ ಪೀರ್ಜಾದೆ, ಜಹೀರ್ ಘೀವಾಲೆ ರೆಹಾನ್ ಅಜೀಜ್‌ಗೆ ಜಾಮೀನು ಸಿಕ್ಕಿದೆ.
ಪ್ರಚೋದನೆ ಮಾಡದಂತೆ ಷರತ್ತು ವಿಧಿಸಿರುವ ಡಿಸಿಪಿ, ತಲಾ ಒಬ್ಬರಿಗೆ 50 ಸಾವಿರ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ. ಕಲೆದ ಸೆ. 27ರಂದು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ನಡೆಸಿ ಸಿಆರ್‌ಪಿಸಿ 110 ಸೆಕ್ಷನ್ ಅಡಿ ಈ 7 ಜನರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಬೆಳಗಾವಿಯಲ್ಲಿ 7 ಮಂದಿ ಪಿಎಫ್ಐ ಮುಖಂಡರ ಬಂಧನ: ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್