ETV Bharat / state

ಬೆಳಗಾವಿ: ಮಳೆಗಾಲದಲ್ಲಿ ಬಳ್ಳಾರಿ ನಾಲಾ ನೀರಿ‌ನಿಂದ ತಪ್ಪಿಲ್ಲ ರೈತರ ಗೋಳು - Ballari Nala

ಬೆಳಗಾವಿ ಜಿಲ್ಲೆಯ ಬಳ್ಳಾರಿ ನಾಲಾ ಹೂಳು ಎತ್ತಬೇಕೆಂಬ ಬಹುದಿನಗಳ ಬೇಡಿಕೆ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಪ್ರತಿವರ್ಷ ಭರವಸೆಗಳನ್ನು ಮಾತ್ರ ನೀಡುತ್ತಿದ್ದಾರೆ. ಇದರಿಂದ ಅಪಾರ ಪ್ರಮಾಣದ ಜಮೀನುಗಳಿಗೆ ನೀರು ನುಗ್ಗಿ ರೈತರಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.

ballari-nala-water-entered-in-to-agriculture-fields
ಮಳೆಗಾಲದಲ್ಲಿ ಬಳ್ಳಾರಿ ನಾಲಾ ನೀರಿ‌ನಿಂದ ತಪ್ಪಿಲ್ಲ ರೈತರ ಗೋಳು
author img

By

Published : Jun 20, 2021, 3:49 PM IST

ಬೆಳಗಾವಿ: ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇನ್ನೇನು ಕೈಗೆ ಸಿಗಬೇಕಿದ್ದ ಬೆಳೆ ಬಳ್ಳಾರಿ ನಾಲಾ ನೀರಿಗೆ ಹಾಳಾಗಿದೆ. ಇದರಿಂದ ರೈತ ಸಮುದಾಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಮಳೆಗಾಲದಲ್ಲಿ ಬಳ್ಳಾರಿ ನಾಲಾ ನೀರಿ‌ನಿಂದ ತಪ್ಪಿಲ್ಲ ರೈತರ ಗೋಳು

ನಗರದ ಹೊರವಲಯದಲ್ಲಿ ಹಾಯ್ದು ಹೋಗುವ ಬಳ್ಳಾರಿ ನಾಲಾ ನೀರಿನಿಂದ ಪ್ರತಿವರ್ಷವೂ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿನ ಬೆಳೆ ಜಲಾವೃತವಾಗಿ ಕೊಳೆತು ಹೋಗುತ್ತಿದೆ. ಸುಮಾರು ಇಪ್ಪತೈದು ವರ್ಷಗಳ ನಮ್ಮ ಬೇಡಿಕೆ, ಹೋರಾಟಕ್ಕೆ ಸರ್ಕಾರ ಮಾತ್ರ ಈವರೆಗೂ ಸ್ಪಂದಿಸುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಉಪನದಿಯಾಗಿರುವ ಬಳ್ಳಾರಿ ನಾಲಾ ಸುಮಾರು 58 ಕಿಮೀ ಹರಿದು ಮಾರ್ಕಂಡೇಯ ನದಿಗೆ ಸೇರುತ್ತದೆ. ಯಳ್ಳೂರಿನಿಂದ ಹಲಗಾ-ಬಸ್ತವಾಡ, ವಡಗಾಂವ, ಶಹಾಪೂರ ಸೇರಿ ಅನೇಕ ಹಳ್ಳಿಗಳಲ್ಲಿ ಹಾಯ್ದು ಹೋಗುತ್ತದೆ. ಮಳೆ ಜೋರಾಗಿ ಬಂದ್ರೆ ಸಾಕು ಅನೇಕ ಗ್ರಾಮಗಳಲ್ಲಿ ನಾಲೆಯ ನೀರು ಹರಿದು ರೈತರಿಗೆ ಸಂಕಷ್ಟ ತಂದಿಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಬಳ್ಳಾರಿ ನಾಲೆಯಿಂದ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ಓದಿ:ಶಾಸಕ ಅರವಿಂದ್‌ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಯುತ್ತಿದೆ : ಗೃಹ ಸಚಿವ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.