ಅಥಣಿ: ಪೋಲಿಸರು ಕಾರ್ಯಾಚರಣೆ ನಡೆಸಿ ಓರ್ವ ಬೈಕ್ ಕಳ್ಳನನ್ನು ಬಂಧಿಸಲಾಗಿದ್ದು, 1,40,000 ರೂ. ಮೌಲ್ಯದ ಏಳು ಬೈಕ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅಥಣಿ ಪೋಲಿಸರು ಇದರ ಬಗ್ಗೆ ಮಾಹಿತಿ ನೀಡಿದ್ದು, 26 ವರ್ಷದ ಆರೋಪಿ ಪೀರಸಾಬ ರಾಜೇಸಾಬ ಕುಪವಾಡಿ ಬಂಧಿತ ಆರೋಪಿ. ಕಾಗವಾಡದವನಾದ್ದ ಈತನಿಂದ ಏಳು ಬೈಕ್ ವಶಪಡಿಸಿಕೊಂಡದ್ದಾರೆ.
ಇತನ ವಿರುದ್ಧ ಸೆಕ್ಷನ್ 4(1)(ಡಿ) ಕಳ್ಳತನ ಮತ್ತು ಸಿಆರ್‌ಪಿಸಿ ಮತ್ತು 379 ಐಪಿಸಿ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ.
ಅಥಣಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಮೋಟರ್ ಸೈಕಲ್ ಕಳ್ಳತನ ಪ್ರಕರಣ ಪತ್ತೆ ಹಚ್ಚುವ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಲಕ್ಷಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅಮರನಾಥ ರೆಡ್ಡಿ, ಕೆಎಸ್‌ಪಿಎಸ್, ಬೆಳಗಾವಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗಿತ್ತು.