ETV Bharat / state

ಅಥಣಿ ಲಾಕ್​ಡೌನ್: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 9 ರಸ್ತೆಗಳು ಬಂದ್​! - athani news

ಅಥಣಿ, ಜಮಖಂಡಿ, ವಿಜಯಪುರ, ಮಹಾರಾಷ್ಟ್ರ, ಚಿಕ್ಕೋಡಿ, ರಾಯಬಾಗದಿಂದ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ತಾಲೂಕಿನ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಪಕ್ಕದ ತಾಲೂಕಿನ ಜನರು ಹಲ್ಯಾಳ ಮಾರ್ಗವಾಗಿ ಅಥಣಿಗೆ ಬರುವ ಸಂದರ್ಭದಲ್ಲಿ ಪೊಲೀಸರು ಪ್ರತಿಯೊಬ್ಬರನ್ನೂ ವಿಚಾರಿಸಿ ಅನಿವಾರ್ಯ ಇದ್ದವರನ್ನು ಮಾತ್ರವೇ ಒಳ ಬಿಡುತ್ತಿದ್ದಾರೆ.

athani
ಅಥಣಿ ಲಾಕ್​ಡೌನ್
author img

By

Published : Jul 15, 2020, 5:39 PM IST

ಅಥಣಿ: ತಾಲೂಕಿನಲ್ಲಿ ಕೊರೊನಾ ಅಬ್ಬರದಿಂದಾಗಿ ರಾಜ್ಯ ಸರ್ಕಾರ ಇಲ್ಲಿ ಒಂದು ವಾರ ಕಾಲ ಲಾಕ್​ಡೌನ್ ಘೋಷಣೆ ಮಾಡಿದೆ. ಹೀಗಾಗಿ ಅಥಣಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ತಾಲೂಕು ಆಡಳಿತ ಬಂದ್​ ಮಾಡಿದೆ.

ಅಥಣಿ, ಜಮಖಂಡಿ, ವಿಜಯಪುರ, ಮಹಾರಾಷ್ಟ್ರ, ಚಿಕ್ಕೋಡಿ, ರಾಯಬಾಗದಿಂದ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ತಾಲೂಕಿನ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

athani
ಅಥಣಿ ಲಾಕ್​ಡೌನ್

ಬೆಳಗಾವಿ ಜಿಲ್ಲೆಯ ಗೋಕಾಕ್​, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಿಂದೀಚೆಗೆ ಕೋವಿಡ್ ಸೋಂಕು ಹರಡುವಿಕೆ ಹೆಚ್ಚಳವಾಗುತ್ತಿದೆ. ಅಲ್ಲದೆ ಮರಣ ಪ್ರಮಾಣ ಕೂಡ ಹೆಚ್ಚಳವಾಗಿದೆ. ಅದರಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಜ್ಞರೊಂದಿಗೆ ಈ ವಿಷಯದ ಕುರಿತು ಚರ್ಚಿಸಿ ಹಾಗೂ ವಿವರವಾಗಿ ಪರಿಶೀಲಿಸಿ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಆ ಬಳಿಕ ವಿಪತ್ತು ನಿರ್ವಹಣೆ ಕಾಯ್ದೆ 2005ರ ಅಡಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯಾದ ಎಂ.ಜಿ.ಹಿರೇಮಠ, ಅಥಣಿ ಲಾಕ್​ಡೌನ್​ಗೆ ಆದೇಶ ಮಾಡಿದ್ದಾರೆ. ಹೀಗಾಗಿ ಪೊಲೀಸರು ಅಥಣಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್​ ಮಾಡಿದ್ದಾರೆ.

ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 9 ರಸ್ತೆಗಳು ಬಂದ್

ತಾಲೂಕಿನ ಗಡಿ ಪ್ರದೇಶದ ಗ್ರಾಮಗಳಾದ ತೇಲಸಗ, ಹಲ್ಯಾಳ, ಮದಬಾವಿ, ಮುರಗುಂಡಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಳಿಸಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ ಪಕ್ಕದ ತಾಲೂಕಿನ ಜನರು ಹಲ್ಯಾಳ ಮಾರ್ಗವಾಗಿ ಅಥಣಿಗೆ ಬರುವ ಸಂದರ್ಭದಲ್ಲಿ ಪೊಲೀಸರು ಪ್ರತಿಯೊಬ್ಬರನ್ನೂ ವಿಚಾರಿಸಿ ಅನಿವಾರ್ಯ ಇದ್ದವರನ್ನು ಮಾತ್ರವೇ ಒಳ ಬಿಡುತ್ತಿದ್ದಾರೆ. ಇದರಿಂದ ಕಿಲೋ ಮೀಟರ್​ಗಟ್ಟಲೆ​ ದೂರ ವಾಹನ ದಟ್ಟಣೆ ಉಂಟಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.