ETV Bharat / state

3 ತಿಂಗಳ ನಂತರ ಸಹಜ ಸ್ಥಿತಿಗೆ ಮರಳುತ್ತಿರುವ ಅಥಣಿ ಪಟ್ಟಣ - ಕೊರೊನಾ ವೈರಸ್

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್​​​​​​ಡೌನ್ ಆಗಿದ್ದ ಅಥಣಿ, ಕೇಂದ್ರ ಸರ್ಕಾರದ ಹೊಸ ನಿಯಮದ ಅನುಸಾರ ಮೂರು ತಿಂಗಳ ನಂತರ ಸಹಜ ಸ್ಥಿತಿಗೆ ಮರಳುತ್ತಿದೆ.

athani
athani
author img

By

Published : Jun 10, 2020, 9:53 AM IST

ಅಥಣಿ (ಬೆಳಗಾವಿ): ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್​​​​​ಡೌನ್ ಜಾರಿಯಾದ ಬೆನ್ನಲ್ಲೇ ಅಥಣಿ ಸಂಪೂರ್ಣ ಸ್ತಬ್ಧಗೊಂಡಿತ್ತು. ಕೇಂದ್ರ ಸರ್ಕಾರದ ಅನ್​​​​ಲಾಕ್ ಹಾಗೂ ಹೊಸ ನಿಯಮದ ಅನುಸಾರ ಶಿವಯೋಗಿ ನಾಡು ಮೊದಲಿನಂತೆ ಕಂಗೊಳಿಸುತ್ತಿದೆ.

ಸಹಜ ಸ್ಥಿತಿಗೆ ಮರಳುತ್ತಿರುವ ಅಥಣಿ

ಸಿನಿಮಾ ಮಂದಿರ ಹೊರತು ಪಡಿಸಿ, ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ. ಪರಿಣಾಮ ವ್ಯಾಪಾರ ವಹಿವಾಟು ಬಿರುಸಿನಿಂದ ಸಾಗಿದೆ. ಇತ್ತ ಹೋಟೆಲ್​​​​​ ವಹಿವಾಟು ಮುಂದುವರೆದಿದೆ.

ಪಟ್ಟಣದ ವ್ಯಾಪಾರಸ್ಥರ ಮೊಗದಲ್ಲಿ ಕಳೆ ಮೂಡಿದೆ. ವ್ಯಾಪಾರಸ್ಥರಾಗಿರುವ ಶ್ರೀಶೈಲ ಪಟ್ಟಣಶೆಟ್ಟಿ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ವ್ಯಾಪಾರ ಇಲ್ಲದೇ ನಷ್ಟ ಸಂಭವಿಸಿದೆ. ನಿನ್ನೆಯಿಂದ ಪಟ್ಟಣಕ್ಕೆ ಜನರು ಬರುತ್ತಿದ್ದಾರೆ. ಚೆನ್ನಾಗಿ ವ್ಯಾಪಾರ ವಹಿವಾಟು ಪ್ರಾರಂಭವಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.