ಬೆಳಗಾವಿ: ಇಂದಿನ ಮಕ್ಕಳಿಗೆ ಸಮಾಜದಲ್ಲಿರುವ ಮೌಲ್ಯ ಹೆಚ್ಚಿಸುವ ನೈತಿಕ ಶಿಕ್ಷಣ ಕಲಿಸಬೇಕಾಗಿದೆ ಎಂದು ಎನ್ಎಸ್ಎಸ್ ಲೆಫ್ಟಿನೆಂಟ್ ಅಭಯ್ ಅವಸ್ಥಿ ಹೇಳಿದರು.
ಬೆಳಗಾವಿಯ ಪ್ರತಿಷ್ಠಿತ ಜೆಎಸ್ಎಸ್ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇವತ್ತಿನ ಯುವ ಸಮೂಹ ಕೇವಲ ಪುಸ್ತಕದ ಹುಳುಗಳಾಗಿದ್ದು, ಈ ಸನ್ನಿವೇಶ ಬದಲಾಗಬೇಕು. ಮಕ್ಕಳು ಶಾಲಾ ಪುಸ್ತಕದ ಹೊರತಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು.
ಮಕ್ಕಳಿಗೆ ಕೇವಲ ಪುಸ್ತಕದಲ್ಲಿರುವ ವಿಷಯಗಳ ಬಗ್ಗೆ ಮಾತ್ರ ತಿಳಿಸದೆ, ಅವರ ಆರೋಗ್ಯ ಹಾಗೂ ಸಮಾಜದಲ್ಲಿರುವ ಮೌಲ್ಯ ಹೆಚ್ಚಿಸುವ ನೈತಿಕ ಶಿಕ್ಷಣ ಕಲಿಸಬೇಕಾಗಿದೆ. ಸದೃಢ ಸಮಾಜ ನಿರ್ಮಿಸಲು ಇಂದಿನ ಯುವಕರನ್ನು ತಯಾರಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಕಿವಿಮಾತು ಹೇಳಿದರು.