ETV Bharat / state

ಬೆಳಗಾವಿಯಲ್ಲಿ ನಾಲ್ವರು ಸರಗಳ್ಳರ ಬಂಧನ... 184 ಗ್ರಾಂ ಚಿನ್ನಾಭರಣ ವಶಕ್ಕೆ

author img

By

Published : Aug 3, 2019, 6:02 AM IST

ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ನಡೆದ ಸರಗಳ್ಳತನ ಪ್ರಕರಣವನ್ನು ಭೇದಿಸಿರುವ ಕುಂದಾನಗರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನರ ಬಂಧನ

ಬೆಳಗಾವಿ: ನಗರ ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ಮೂರು ದ್ವಿಚಕ್ರ ವಾಹನ ಹಾಗೂ 8 ಲಕ್ಷದ 99 ಸಾವಿರ ಮೌಲ್ಯದ 184 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಉದ್ಯಮಬಾಗ ಪ್ರದೇಶದ ಲಕ್ಷೀ ನಗರ ಎಕೆಪಿ ಫೌಂಡ್ರಿ ರಸ್ತೆಯ ನಿವಾಸಿಗಳಾದ ದೀಪಕ್​ ಸುರೇಶ್​ ಅಗಸಿಮನಿ (21), ದೇವರಾಜ ಯಲ್ಲಪ್ಪ ಪೂಜಾರಿ (21), ನಾಗರಾಜ ಚಿದಾನಂದ ತಳವಾರ (20) ಹಾಗೂ ಅಸ್ಲಂ ಮೌಲಾಸಾಬ ಶೇರೆಗಾರ (20) ಬಂಧಿತರು.

ಮೇ 11 ರಂದು ನಗರದ ದೇಶಪಾಂಡೆ ಚಾಳದ ವಿಮಲಾ ಸೀತಾರಾಮ ಶಿಂಧೆ ಎಂಬುವರು ಸಂತೋಷ - ನಿರ್ಮಲ ಟಾಕೀಸ್ ಬಳಿ ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಜ್ಜಿ ಅಜ್ಜಿ ಎಂದು ಕರೆದಿದ್ದಾರೆ. ಹಿಂದಿರುಗಿ ನೋಡುತ್ತಿದ್ದಂತೆ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರು ಕೊರಳಲ್ಲಿದ್ದ 32 ಸಾವಿರ ರೂ. ಮೌಲ್ಯದ 12 ಗ್ರಾಂ. ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ನಗರದ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಖಡೇಬಜಾರ್​​​ ಹಾಗೂ ಉದ್ಯಮಬಾಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

Intro:ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನ ಕಳ್ಳರ ಬಂಧನ : ಚಿನ್ನಾಭರಣ ವಶ

ಬೆಳಗಾವಿ : ನಗರದ ಹಾಗೂ ಜಿಲ್ಲೆಯ ವಿವಿಧಕಡೆ ಸರಗಳ್ಳತನ ನಡೆದಿದ್ದ ಪ್ರಕರಣರವನ್ನು ಬೇಧಿಸಿರುವ ಬೆಳಗಾವಿ ನಗರ ಪೊಲೀಸರು ಶುಕ್ರವಾರ ನಾಲ್ಕು ಜನರನ್ನು ಬಂಧಿಸಿ, ಅವರಿಂದ ಮೂರು ದ್ವಿಚಕ್ರ ವಾಹನ ಹಾಗೂ 8 ಲಕ್ಷ 99 ಸಾವಿರ ಮೌಲ್ಯದ 184 ಗ್ರಾಂ. ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಉದ್ಯಮಬಾಗ ಪ್ರದೇಶದ ಲಕ್ಷೀ ನಗರ ಎಕೆಪಿ ಫೌಂಡ್ರಿ ರೋಡನ ನಿವಾಸಿಗಳಾಸದ ದೀಪಕ ಸುರೇಶ ಅಗಸಿಮನಿ (21), ದೇವರಾಜ ಯಲ್ಲಪ್ಪ ಪೂಜಾರಿ (21), ನಾಗರಾಜ ಚಿದಾನಂದ ತಳವಾರ (20) ಹಾಗೂ
ಅಸ್ಲಂ ಮೌಲಾಸಾಬ ಶೇರೆಗಾರ (20) ಬಂಧಿತರು.

Body:ಮೇ.11 ರಂದು ನಗರದ ದೇಶಪಾಂಡೆ ಚಾಳದ ವಿಮಲಾ ಸೀತಾರಾಮ ಶಿಂಧೆ ಎಂಬುವರು ಸಂತೋಷ - ನಿರ್ಮಲ ಟಾಕೀಸ್ ಬೋಳದಲ್ಲಿ ಹೋಗುತ್ತಿದ್ದರು. ಈ ವೇಳೆ ಇಬ್ಬರು ದ್ವಿಚಕ್ರ ವಾಹನದ ಮೇಲೆ ಬಂದು ಅಜ್ಜಿ ಅಜ್ಜಿ ಎಂದು ಕರೆದಿದ್ದಾರೆ. ಈ ವೇಳೆ ಕರೆಯುತ್ತಿದ್ದಾರೆ ಎಂದು ಹಿಂದುರಗಿ ನೀಡುತ್ತಿದ್ದಂತೆ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರು ಸರಗಳ್ಳರು ಕೊರಳಲ್ಲಿದ್ದ 32 ಸಾವಿರ ರು. ಮೌಲ್ಯದ 12 ಗ್ರಾಂ. ತೂಕದ ಹಾರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

Conclusion:ಈ ಕುರಿತು ನಗರದ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡ ಖಡೇಬಜಾರ ಹಾಗೂ ಉದ್ಯಮಬಾಗ ಪೊಲೀಸರು. ನಾಲ್ಕು ಜನ ಸರಗಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ನಂತರ ವಿಚಾರಣೆಗೆ ಒಳಪಡಿಸಲಾಗಿದೆ.

ವಿನಾಯಕ ಮಠಪತಿ
ಬೆಳಗಾವಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.