ETV Bharat / entertainment

ಚಿತ್ರಮಂದಿರದಲ್ಲಿ ದಳಪತಿ ವಿಜಯ್ 'ಗೋಟ್​' ವೀಕ್ಷಿಸಿಲ್ವಾ?: ಹಾಗಾದ್ರೆ ಒಟಿಟಿಯಲ್ಲಿ ನೋಡಲು ರೆಡಿಯಾಗಿ - GOAT OTT Release Date - GOAT OTT RELEASE DATE

ವೆಂಕಟ್ ಪ್ರಭು ಮತ್ತು ದಳಪತಿ ವಿಜಯ್ ಕಾಂಬಿನೇಶನ್​​ನ ''ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್'' ಬಹು ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಜಾಗತಿಕವಾಗಿ 400 ಕೋಟಿ ರೂಪಾಯಿ ಗಳಿಕೆ ಮಾಡಿದ ನಂತರ ಒಟಿಟಿ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲು ಈ ಚಿತ್ರ ಸಜ್ಜಾಗಿದೆ.

Greatest of All Time
ದಳಪತಿ ವಿಜಯ್ ಮುಖ್ಯಭೂಮಿಕೆಯ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (Photo: Trailer Screengrab)
author img

By ETV Bharat Karnataka Team

Published : Oct 1, 2024, 2:24 PM IST

ಸೌತ್​ ಸೂಪರ್​​ ಸ್ಟಾರ್ ದಳಪತಿ ವಿಜಯ್ ಮುಖ್ಯಭೂಮಿಕೆಯ ಬಹು ನಿರೀಕ್ಷಿತ ಚಿತ್ರ ''ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್'' (ಗೋಟ್​/GOAT) ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ನೀವು ಈ ಸಿನಿಮಾ ನೋಡಬಹುದಾಗಿದೆ. ಸ್ಟ್ರೀಮಿಂಗ್ ಪ್ಲ್ಯಾಟ್​ಫಾರ್ಮ್​​ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದೆ. ಅಕ್ಟೋಬರ್ 3 ರಿಂದ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಾಗಲಿದೆ.

ವೆಂಕಟ್ ಪ್ರಭು ನಿರ್ದೇಶನದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ವಿಸ್ತೃತ ಆವೃತ್ತಿಯನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆಯೇ? ಎಂಬ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಊಹಿಸಿದ್ದರು. ಅದಾಗ್ಯೂ, ಲೇಟೆಸ್ಟ್ ಪೋಸ್ಟರ್ ಥಿಯೇಟ್ರಿಕಲ್ ವರ್ಷನ್​ ಅನ್ನೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶಿಸಲಾಗುವುದು ಎಂಬುದರ ಸುಳಿವು ಕೊಟ್ಟಿದೆ.

ಒಟಿಟಿಯಲ್ಲಿ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ? ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಫೈನಲಿ ಇಂದು ನೆಟ್‌ಫ್ಲಿಕ್ಸ್ ಇಂಡಿಯಾ ಸೌತ್ ತನ್ನ ಅಧಿಕೃತ ಎಕ್ಸ್ ಪೇಜ್‌ನಲ್ಲಿ ಒಟಿಟಿ ರಿಲೀಸ್​ಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಹಮಚಿಕೊಂಡಿದೆ. ಅನೌನ್ಸ್​​ಮೆಂಟ್​ ಜೊತೆಗೆ ಹೊಸ ಪೋಸ್ಟರ್ ಅನ್ನೂ ಹಂಚಿಕೊಂಡಿದೆ. "ಸಿಂಹ G.O.A.T ಆಗುವುದನ್ನು ಎಂದಾದರೂ ನೋಡಿದ್ದೀರಾ? ದಳಪತಿ ವಿಜಯ್ ಅವರ The G.O.A.T - ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ನೆಟ್‌ಫ್ಲಿಕ್ಸ್‌ಗೆ ಅಕ್ಟೋಬರ್ 3 ರಂದು ಎಂಟ್ರಿ ಕೊಡಲಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಲಭ್ಯವಿರಲಿದೆ'' ಎಂದು ಬರೆದುಕೊಂಡಿದೆ. ಬಹುನಿರೀಕ್ಷಿತ ಚಿತ್ರ ಸೆಪ್ಟೆಂಬರ್ 5 ರಂದು ಬಹಳ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿ, ನಿರೀಕ್ಷೆಯಂತೆ ಯಶ ಕಂಡಿದೆ.

ಚಿತ್ರಮಮದಿರಗಳಲ್ಲಿ 25 ಯಶಸ್ವಿ ದಿನಗಳನ್ನು ಪೂರೈಸಿರುವ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ವಿಶ್ವಾದ್ಯಂತ 400 ಕೋಟಿ ರೂಪಾಯಿಗೂ (ಗ್ರಾಸ್​ ಕಲೆಕ್ಷನ್​) ಅಧಿಕ ಕಲೆಕ್ಷನ್​ ಮಾಡಿದೆ. ಬ್ಲಾಕ್ಬಸ್ಟರ್ ಚಿತ್ರ ಎಂದು ಪ್ರಶಂಸಿಸಲ್ಪಟ್ಟಿದ್ದು, ತಮಿಳುನಾಡಿನಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನ ಮುಂದುವರಿಸಿದೆ.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಮಧ್ಯಂತರ' ಕಿರುಚಿತ್ರ ಮೆಚ್ಚಿದ ಹಿರಿಯ ನಟಿ ಜಯಮಾಲ - Jayamala on Madhyantara

ಸೆಪ್ಟೆಂಬರ್ 29 ರಂದು, ನಿರ್ದೇಶಕ ವೆಂಕಟ್ ಪ್ರಭು ಸಿನಿಮಾ ಯಶಸ್ಸಿನ ಸಲುವಾಗಿ ಹೃದಯಸ್ಪರ್ಶಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಪ್ರೇಕ್ಷಕರು, ಅಭಿಮಾನಿಗಳಿಗೆ ತಮ್ಮ ಕೃತಜ್ಞತೆ ಅರ್ಪಿಸಿದ ನಿರ್ದೇಶಕರು, "ದೇವರು ಕರುಣಾಮಯಿ. ನಮ್ಮ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾವನ್ನು ಮೆಗಾ ಬ್ಲಾಕ್‌ಬಸ್ಟರ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ತಿಳಿಸಿದರು.

ಇದನ್ನೂ ಓದಿ: ತಾರಕಕ್ಕೇರಿದ ಮೊದಲ ನಾಮಿನೇಶನ್‍ ತಾಪ; ಸ್ಪರ್ಧಿಗಳ ನಡುವೆ ವಾದ ವಿವಾದ: ನಿಮ್ಮ ಪ್ರಕಾರ ಯಾರಾಗ್ತಾರೆ ನಾಮಿನೇಟ್​? - Bigg Boss Kannada 11

ಈ ಆ್ಯಕ್ಷನ್​​ ಥ್ರಿಲ್ಲರ್ ಚಿತ್ರದಲ್ಲಿ ವಿಜಯ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಶಾಂತ್, ಪ್ರಭುದೇವ, ಮೋಹನ್, ಜಯರಾಮ್, ಸ್ನೇಹಾ, ಲೈಲಾ, ಅಜ್ಮಲ್ ಅಮೀರ್, ಮೀನಾಕ್ಷಿ ಚೌಧರಿ, ವೈಭವ್, ಪ್ರೇಮ್ಗಿ ಅಮರೇನ್ ಮತ್ತು ಯುಗೇಂದ್ರನ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಜಿಎಸ್ ಎಂಟರ್‌ಟೈನ್‌ಮೆಂಟ್‌ ಅದ್ಧೂರಿಯಾಗಿ ನಿರ್ಮಿಸಿರುವ ಈ ಸಿನಿಮಾಗೆ ಸಂಗೀತವನ್ನು ಯುವನ್ ಶಂಕರ್ ರಾಜಾ ಸಂಯೋಜಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.