ETV Bharat / bharat

7 ಹೊಸ ಜಿಲ್ಲೆ ರಚನೆ ವಿರೋಧಿಸಿ ಮಣಿಪುರದಲ್ಲಿ ಅ.3 ರಿಂದ ರಾಜ್ಯವ್ಯಾಪಿ ಬಂದ್ - bandh in Manipur

author img

By ETV Bharat Karnataka Team

Published : 2 hours ago

ಮಣಿಪುರದಲ್ಲಿ 48 ಗಂಟೆಗಳ ಕಾಲ ಮುಷ್ಕರಕ್ಕೆ ಯುನೈಟೆಡ್ ನಾಗಾ ಕೌನ್ಸಿಲ್ ಕರೆ ನೀಡಿದೆ.

ಯುನೈಟೆಡ್ ನಾಗಾ ಕೌನ್ಸಿಲ್
ಯುನೈಟೆಡ್ ನಾಗಾ ಕೌನ್ಸಿಲ್ (IANS)

ಇಂಫಾಲ್: ರಾಜ್ಯದ ನಾಗಾ ಪ್ರಾಬಲ್ಯದ ಪ್ರದೇಶಗಳಲ್ಲಿ ಏಳು ಹೊಸ ಜಿಲ್ಲೆಗಳನ್ನು ಏಕಪಕ್ಷೀಯವಾಗಿ ರಚಿಸಿರುವುದನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಮಣಿಪುರ ಮೂಲದ ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್​ಸಿ) ಅಕ್ಟೋಬರ್ 3ರ ಮಧ್ಯರಾತ್ರಿಯಿಂದ 48 ಗಂಟೆಗಳ ಕಾಲ ರಾಜ್ಯವ್ಯಾಪಿ ಬಂದ್​ಗೆ ಕರೆ ನೀಡಿದೆ.

ಡಿಸೆಂಬರ್ 2016 ರಲ್ಲಿ ಏಕಪಕ್ಷೀಯವಾಗಿ 7 ಜಿಲ್ಲೆಗಳನ್ನು ರಚಿಸಿದ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ಯಥಾಸ್ಥಿತಿಯನ್ನು ಪುನಃಸ್ಥಾಪಿಸಬೇಕು ಎಂದು ಯುಎನ್​ಸಿ ಒತ್ತಾಯಿಸಿದೆ.

"ನಾಗಾ ಜನರು ಮಾತುಕತೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಹೀಗಾಗಿಯೇ ಮಾತುಕತೆಯ ಮೂಲಕ ಕುಂದುಕೊರತೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪದೇ ಪದೆ ಮನವಿ ಮಾಡಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೆ ನಮ್ಮ ಮನವಿಗೆ ಯಾವುದೇ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ, ನಾಗಾ ಜನತೆ ಅಕ್ಟೋಬರ್ 3 ರ ಮಧ್ಯರಾತ್ರಿಯಿಂದ 48 ಗಂಟೆಗಳ ಸಂಪೂರ್ಣ ಬಂದ್​ಗೆ ಕರೆ ನೀಡಲು ನಿರ್ಧರಿಸಿದ್ದಾರೆ" ಎಂದು ಯುಎನ್​ಸಿ ಹೇಳಿಕೆಯಲ್ಲಿ ತಿಳಿಸಿದೆ.

2016 ರಲ್ಲಿ ಮಣಿಪುರದಲ್ಲಿ ಏಕಪಕ್ಷೀಯವಾಗಿ ಏಳು ಹೊಸ ಜಿಲ್ಲೆಗಳನ್ನು ರಚಿಸಲಾದ ಹಳೆಯ ಸಮಸ್ಯೆಯನ್ನು ಪರಿಹರಿಸುವಂತೆ ಯುಎನ್​ಸಿ ಸೆಪ್ಟೆಂಬರ್ 11 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಂತಿಮ ಗಡುವು ನೀಡಿತ್ತು ಮತ್ತು ಈ ವಿಷಯವನ್ನು 15 ದಿನಗಳಲ್ಲಿ ಪರಿಹರಿಸದಿದ್ದರೆ ತೀವ್ರ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಡಿಸೆಂಬರ್ 8, 2016 ರಂದು ಮಾತೃ ಜಿಲ್ಲೆಗಳನ್ನು ವಿಭಜಿಸುವ ಮೂಲಕ ಏಳು ಹೊಸ ಜಿಲ್ಲೆಗಳನ್ನು ಏಕಪಕ್ಷೀಯವಾಗಿ ರಚಿಸಲಾಗಿದೆ ಎಂದು ಯುಎನ್​ಸಿ ಹೇಳಿಕೆಯಲ್ಲಿ ತಿಳಿಸಿದೆ. ಮಣಿಪುರ ಸರ್ಕಾರ ಮತ್ತು ನಾಗಾ ಜನರ ನಡುವಿನ ನಾಲ್ಕು ಜ್ಞಾಪಕ ಪತ್ರಗಳು ಮಾತ್ರವಲ್ಲದೆ 2011ರಲ್ಲಿ ಭಾರತ ಸರ್ಕಾರ ನೀಡಿದ್ದ ಭರವಸೆಯನ್ನು ಕೂಡ ಕಡೆಗಣಿಸಿ ಏಳು ಹೊಸ ಜಿಲ್ಲೆಗಳನ್ನು ಎಂದು ಅದು ಆರೋಪಿಸಿದೆ.

ಹೊಸ ಜಿಲ್ಲೆಗಳ ರಚನೆಯನ್ನು ವಿರೋಧಿಸಿ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ 139 ದಿನಗಳ ಕಾಲ ಬೃಹತ್ ಪ್ರತಿಭಟನೆ, ಮುಷ್ಕರ ಮತ್ತು ಆರ್ಥಿಕ ದಿಗ್ಬಂಧನ ನಡೆಸಿದ್ದನ್ನು ಮತ್ತು ಕೇಂದ್ರ, ಮಣಿಪುರ ಸರ್ಕಾರ ಮತ್ತು ಯುಎನ್​ಸಿ ನಡುವೆ ಈ ವಿಷಯದ ಬಗ್ಗೆ ಹತ್ತು ಸುತ್ತಿನ ತ್ರಿಪಕ್ಷೀಯ ಮಾತುಕತೆಗಳು ಈಗಾಗಲೇ ನಡೆದಿರುವುದನ್ನು ಪ್ರಕಟಣೆಯಲ್ಲಿ ಪ್ರಸ್ತಾಪಿಸಲಾಗಿದೆ. ನಾಗಾಲ್ಯಾಂಡ್ ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ತಮೆಂಗ್ಲಾಂಗ್, ಚಂದೇಲ್, ಉಖ್ರುಲ್, ಕಾಮ್ಜಾಂಗ್ ನೋನಿ ಮತ್ತು ಸೇನಾಪತಿ ಎಂಬ ಮಣಿಪುರದ ಆರು ಜಿಲ್ಲೆಗಳಲ್ಲಿ ನಾಗಾ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : ಲಡಾಖ್​ಗೆ 6ನೇ ಶೆಡ್ಯೂಲ್​​​ನಲ್ಲಿ ಸ್ಥಾನಮಾನಕ್ಕೆ ಒತ್ತಾಯಿಸಿ ಪಾದಯಾತ್ರೆ; ಸೋನಂ ವಾಂಗ್ಚುಕ್ ಬಂಧನ - Sonam Wangchuk Arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.