ETV Bharat / state

ಬೆಳಗಾವಿ ಹಾಸ್ಟೆಲ್ ಮೇಲೆ ಕಲ್ಲು ತೂರಿದ ಆರೋಪಿಗಳ ಬಂಧನ: ಕೋರ್ಟ್​ಗೆ ಹಾಜರು - ಬೆಳಗಾವಿಯ ಸಂಗಮೇಶ್ವರ ನಗರದ ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಯಲ

ಸಂಗಮೇಶ್ವರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ನುಗ್ಗಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಪಿಎಂಸಿ ಠಾಣೆ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Arrest of eight accused
ಹಾಸ್ಟೆಲ್ ಮೇಲೆ ಕಲ್ಲು ತೂರಿದ ಎಂಟು ಆರೋಪಿಗಳ ಬಂಧನ
author img

By

Published : Feb 27, 2020, 1:17 PM IST

ಬೆಳಗಾವಿ: ಸಂಗಮೇಶ್ವರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ನುಗ್ಗಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಪಿಎಂಸಿ ಠಾಣೆ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸದಾಶಿವ ನಗರದ ಗಣೇಶ ಚೌಕ್‌ನ ಮದನ್ ಅಲಿಯಾಸ್ ಮೋಹಿತ್ ಹುಂ ( 27 ), ಅಂಕುಶ್ ಹಂದ್ರೆ ( 19 ) , ಪ್ರಸಾದ್ ಜಾಂಬಳೆ ( 20 ) , ಪ್ರಥಮೇಶ ವರ್ಪೆ ( 21 ) , ಬೆಲ್ಲದಾರ ಛಾವಣಿಯ ಅಜಯ ಪವಾರ ( 22 ) ಮತ್ತು ಯೋಗೇಶ ತರಳೆ ( 20 ) ಬಂಧಿತ ಆರೋಪಿಗಳು.

ಆರೋಪಿಗಳು ಕೋರ್ಟ್​ಗೆ ಹಾಜರು

ಹುಡುಗಿಯನ್ನು ಚುಡಾಯಿಸಿದ ಹಿನ್ನೆಲೆ ಆರೋಪಿಗಳು ಫೆ. 23ರಂದು ರಾತ್ರಿ ಹಾಸ್ಟೆಲ್​​ಗೆ ನುಗ್ಗಿ ಕಲ್ಲು ತೂರಾಟ ನಡೆಸಿ, ರಾಡ್, ಬ್ಯಾಟ್, ದೊಣ್ಣೆ ಹಿಡಿದು ಕಿಟಕಿ, ಬೈಕ್​ಗಳನ್ನ ಜಖಂಗೊಳಿಸಿದ್ದರು.

ಈ ಗಲಾಟೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ನಂತರ ವಸತಿ ನಿಲಯದ ವಾರ್ಡನ್ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ಯುವತಿ ಕಡೆಯಿಂದಲೂ ವಸತಿ ನಿಲಯದ ವಿದ್ಯಾರ್ಥಿಯೊಬ್ಬನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದರು. ಈ ಪ್ರಕರಣದ ಆರು ಜನ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.