ಬೆಳಗಾವಿ: ಜಿಲ್ಲೆಯ ಅಂಬೋಲಿ ಜಲಪಾತದ ಬಳಿ ಚಲಿಸುತ್ತಿದ್ದ ಕಾರು ಏಕಾಏಕಿ ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಜೀವಂತವಾಗಿ ಸುಟ್ಟು ಭಸ್ಮವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಗರದ ಪೀರನವಾಡಿ ಗ್ರಾಮದ ದುಂಡಪ್ಪಾ ಪದ್ಮನ್ನವರ್ ಮತ್ತು ಅವರ ಪತ್ನಿ ಸಾವಂತವಾಡಿಯಿಂದ ಬೆಳಗಾವಿಗೆ ಬರುತ್ತಿರುವಾಗ ಈ ಅವಘಡ ಸಂಭವಿಸಿದೆ.
ಅಂಬೋಲಿ ಜಲಪಾತದದ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕಾರು ಚಲಾಯಿಸುತ್ತಿದ್ದ ದುಂಡಪ್ಪ ಕಾರಿನಿಂದ ಜಿಗಿದಿದ್ದಾನೆ. ಇನ್ನು ಕಾರಿನಲ್ಲಿದ್ದ ದುಂಡಪ್ಪನ ಪತ್ನಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಕಾರಿನಿಂದ ಹೊರಗೆ ಬರುವಷ್ಟರಲ್ಲಿ ಧಗಧಗನೇ ಹೊತ್ತು ಉರಿದಿದೆ. ಪರಿಣಾಮ ದುಂಡಪ್ಪನ ಪತ್ನಿ ಜೀವಂತವಾಗಿ ಸುಟ್ಟು ಭಸ್ಮವಾಗಿದ್ದಾರೆ.
ಪೀರನವಾಡಿಯ ದುಂಡಪ್ಪ ಪದ್ಮಣ್ಣವರ್ ಗಾಯಗೊಂಡಿದ್ದು, ಸಾವಂತವಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.