ETV Bharat / state

ಕತ್ತಲಿನಿಂದ ಬೆಳಕಿಗೆ ಬರುವಷ್ಟರಲ್ಲಿ ಮತ್ತೆ ನೆರೆ ಭೀತಿ: ಕಂಗಾಲಾದ‌ ಸಂತ್ರಸ್ತರು - ಬೆಳಗಾವಿ ಜಿಲ್ಲೆ

ಎರಡು ಬಾರಿ ಪ್ರವಾಹದ ಹೊಡೆತಕ್ಕೆ ನಲುಗಿದ ನೆರೆ ಸಂತ್ರಸ್ತರಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮತ್ತೆ ಭಯ ಆವರಿಸಿದೆ.

ಕತ್ತಲಿನಿಂದ ಬೆಳಕಿನ ಕಡೆ ಬರುವಷ್ಟರಲ್ಲಿ ಮತ್ತೆ ನೆರೆ ಭೀತಿ: ಕಂಗಾಲಾದ‌ ನೆರೆ ಸಂತ್ರಸ್ತರು
author img

By

Published : Sep 8, 2019, 11:05 PM IST

ಚಿಕ್ಕೋಡಿ: ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಹಲವೆಡೆ ವಿದ್ಯುತ್‌ ವ್ಯವಸ್ಥೆ ಪೂರ್ಣ ಕಡಿತಗೊಂಡ ಹಿನ್ನೆಲೆ ಸತತ ಒಂದೂವರೆ ತಿಂಗಳಿಂದ ಜನರು ಕತ್ತಲಲ್ಲಿ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಹೆಸ್ಕಾಂ ಅಧಿಕಾರಿಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಗ್ರಾಮಗಳು ಮತ್ತೆ ಬೆಳಕು ಕಂಡಿವೆ. ಆದರೆ, ಹಳೆಯ ಆಘಾತದಿಂದ ಚೇತರಿಸಿಕೊಳ್ಳುವುದರೊಳಗೆ ಮತ್ತೆ ಈಗ ಪ್ರವಾಹದ ಭೀತಿ ಎದುರಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಕತ್ತಲಿನಿಂದ ಬೆಳಕಿನ ಕಡೆ ಬರುವಷ್ಟರಲ್ಲಿ ಮತ್ತೆ ನೆರೆ ಭೀತಿ: ಕಂಗಾಲಾದ‌ ಸಂತ್ರಸ್ತರು

ಹೌದು, ಪ್ರವಾಹದಿಂದ ನದಿ ದಡದ ನೂರಾರು ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದವು. ಅನೇಕ ವಿದ್ಯುತ್‌ ಪರಿವರ್ತಕಗಳು ಸಂಪೂರ್ಣ ಪ್ರವಾಹದಲ್ಲಿ ಮುಳುಗಿದ್ದವು. ನಂತರ ಬೆಂಗಳೂರಿನಿಂದ ಹೆಚ್ಚಿನ ಕಾರ್ಮಿಕರನ್ನು ಕರೆಸಿಕೊಂಡು ಸುಮಾರು ನೂರಕ್ಕೂ ಅಧಿಕ ಕಾರ್ಮಿಕರಿಂದ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಸರಿಪಡಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ. ಸದ್ಯ ಹೆಸ್ಕಾಂನಿಂದ ತೋಟ ಪಟ್ಟಿಯ ಕುಡಿಯುವ ನೀರಿನ ಘಟಕ ಹಾಗೂ ಮನೆಗಳಿಗೆ ಪರ್ಯಾಯ ವ್ಯವಸ್ಥೆಯ ಮೂಲಕ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

ಈಗಾಗಲೇ ನದಿ ತೀರದ ಸಾವಿರಾರು ಮಕ್ಕಳು ಹತ್ತನೇ ತರಗತಿ, ಪಿಯುಸಿ, ಪದವಿ ವಿದ್ಯಾಭ್ಯಾಸ ಮಾಡಿ ಪರೀಕ್ಷೆಗೆ ತಯಾರಿ ನಡೆಸಿದ್ದು, ಕಳೆದ‌ ಒಂದೂವರೆ ತಿಂಗಳಿನಿಂದ ಕತ್ತಲಲ್ಲಿ ಜೀವನ ತೆಗೆಯುವಂತಾಗಿದೆ. ಮತ್ತೆ ಪ್ರವಾಹ ಬಂದರೆ ಮನೆಗಳನ್ನು ಬಿಡಬೇಕು. ಇದರಿಂದ ಓದಲು‌ ಹಾಗೂ ಶಾಲೆಗಳಿಗೆ ತೆರಳಲು ಅವಕಾಶ ಇರುವುದಿಲ್ಲ ಮತ್ತು ಇದ್ದ ಪುಸ್ತಕಗಳು ಪ್ರವಾಹದಲ್ಲಿ ಸಿಲುಕಿ ಹಾಳಾಗಿವೆ. ಕತ್ತಲಿನಿಂದ ಬೆಳಕಿನ ಕಡೆಗೆ ಬರಲು ಒಂದೂವರೆ ತಿಂಗಳಾಯಿತು. ಈಗ ಮತ್ತೆ ಪ್ರವಾಹ ಬಂದರೆ ನಮಗೆ ಮತ್ತೆ ಕತ್ತಲೇ ಗತಿ ಎನ್ನುತ್ತಾರೆ ಇಲ್ಲಿನ ನಿರಾಶ್ರಿತರು.

Intro:ಕತ್ತಲಿನಿಂದ ಬೆಳಕಿನ ಕಡೆ ಬರುವಷ್ಟರಲ್ಲಿ ಮತ್ತೆ ನೆರೆಯ ಭೀತಿ : ಮತ್ತೆ ಕಂಗಾಲಾದ‌ ನೆರೆ ಸಂತ್ರಸ್ಥರು
Body:
ಚಿಕ್ಕೋಡಿ :
ಸ್ಟೋರಿ

ಭೀಕರ ಪ್ರವಾಹದಿಂದ ವಿದ್ಯುತ್‌ ವ್ಯವಸ್ಥೆಯಿಡೀ ಧ್ವಂಸಗೊಂಡು ಕಳೆದ ಒಂದುವರೆ ತಿಂಗಳಿಂದ ಕಗ್ಗತ್ತಲಿಗೆ ನೂಕಲ್ಪಟ್ಟಿದ್ದ ಚಿಕ್ಕೋಡಿ ತಾಲೂಕಿನ ದೂಧಗಂಗಾ, ವೇದಗಂಗಾ, ಪಂಚಗಂಗಾ ಹಾಗೂ ಕೃಷ್ಣಾ ನದಿ ತೀರದ ನೂರಾರು ಗ್ರಾಮಗಳು ಮತ್ತೆ ಬೆಳಕು ಕಂಡಿವೆ. ಆದರೆ, ಹಳೆಯ ಆಘಾತದಿಂದ ಚೇತರಿಸಿಕೊಳ್ಳುವುದರೊಳಗೆ ಮತ್ತೆ ಈಗ ಪ್ರವಾಹದ ಆತಂಕದಲ್ಲಿದ್ದಾರೆ‌ ನೆರೆ ಸಂತ್ರಸ್ಥರು.

ನದಿದಡದ ನೂರಾರು ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದವು. ಅನೇಕ ವಿದ್ಯುತ್‌ ಪರಿವರ್ತಕಗಳು ಸಂಪೂರ್ಣ ಪ್ರವಾಹದಲ್ಲಿ ಮುಳುಗಿದ್ದವು. ಇದರಿಂದ ಸಂಪರ್ಕ ಕಡಿತವಾಗಿ ನೆರೆ ಸಂತ್ರಸ್ತರು ಕಳೆದ ಒಂದೂವರೆ ತಿಂಗಳಿಂದ ದೀಪದ ಬೆಳಕಿನಲ್ಲೇ ಬದುಕು ಕಳೆಯಬೇಕಾಗಿತ್ತು. ಸದ್ಯ ಹೆಸ್ಕಾಂನಿಂದ ತೋಟಪಟ್ಟಿಯ ಕುಡಿಯುವ ನೀರಿನ ಘಟಕ ಹಾಗೂ ಮನೆಗಳಿಗೆ ಪರ್ಯಾಯ ವ್ಯವಸ್ಥೆಯ ಮೂಲಕ ವಿದ್ಯುತ್‌ ಸಂಪರ್ಕ ಕಲ್ಪಿಸಿದೆ.

ಈಗಾಗಲೇ ನದಿ ತೀರದ ಸಾವಿರಾರು ಮಕ್ಕಳು ಹತ್ತನೇ ತರಗತಿ, ಪಿಯುಸಿ, ಪದವಿ ವಿದ್ಯಾರ್ಥಿಗಳ ಪರಿಕ್ಷೆಗೆ ತಯಾರಿ ನಡೆಸಿದ್ದು ಈಗ ಕಳೆದ‌ ಒಂದುವರೆ ತಿಂಗಳಿನಿಂದ ಕತ್ತಲಲ್ಲಿ ಜೀವನ ತೆಗೆಯುತ್ತಿದ್ದು ಈಗ ಮತ್ತೆ ಪ್ರವಾಹ ಬಂದರೆ ಮನೆಗಳನ್ನು ಬಿಡಬೇಕು. ಮನೆಗಳನ್ನು ಬಿಟ್ಟರೆ ಓದಲು‌ ಹಾಗೂ ಶಾಲೆಗಳಿಗೆ ತೆರಳಲು ಅವಕಾಶ ಇರುವುದಿಲ್ಲ ಮತ್ತು ಇದ್ದ ಪುಸ್ತಕಗಳು ಪ್ರವಾಹದಲ್ಲಿ ಸಿಲುಕಿ ಹಾಳಾಗಿವೆ. ಕತ್ತಲಿನಿಂದ ಬೆಳಕಿನ ಕಡೆಗೆ ಬರಲು ಒಂದುವರೆ ತಿಂಗಳಾಯಿತು. ಈಗ ಮತ್ತೆ ಪ್ರವಾಹ ಬಂದರೆ ನಮ್ಮಗೆ ಮತ್ತೆ ಕತ್ತಲೆ ಗತಿ ಎನ್ನುತ್ತಾರೆ ಇಲ್ಲಿನ ನಿರಾಶ್ರಿತರು.

ಮತ್ತೆ ಕಾಡುತ್ತಿದೆ ಪ್ರವಾಹ ಭೀತಿ : 

ಈಗಾಗಲೇ ಎರಡು ಬಾರಿ ಪ್ರವಾಹದ ಹೊಡೆತಕ್ಕೆ ನಲುಗಿದ ನೆರೆ ಸಂತ್ರಸ್ತರಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮತ್ತೆ ಭಯ ಆವರಿಸಿದೆ. ಬೆಂಗಳೂರಿನಿಂದ ಹೆಚ್ಚಿನ ಕಾರ್ಮಿಕರನ್ನು ಕರೆಸಿಕೊಂಡು ಸುಮಾರು ನೂರಕ್ಕೂ ಅಧಿಕ ಕಾರ್ಮಿಕರಿಂದ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಸರಿಪಡಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ. ಆದರೆ, ಎಲ್ಲಮುಗಿದ ಬಳಿಕ ನೆರೆ ಬಂದು ಹಾಳುಮಾಡುತ್ತದೆ ಎಂಬ ಭಯದಲ್ಲೇ ಮತ್ತಷ್ಟು ಕಾಮಗಾರಿಗಳು ಮುಂದುವರಿದಿವೆ. 

ನದಿ ತೀರದ ಗ್ರಾಮಗಳಲ್ಲಿನ ವಿದ್ಯುತ್‌ ಸಂಪರ್ಕ ಕಲ್ಪಿಸುವ ಪರಿವರ್ತಕಗಳು ನೆಲಕ್ಕುರುಳಿದ್ದು ಪಂಪ್‌ಸೆಟ್‌ಗಳು ಪ್ರವಾಹಕ್ಕೆ ಕೊಚ್ಚಿಹೋಗಿವೆ. ಮತ್ತಷ್ಟು ಪಂಪ್‌ಸೆಟ್‌ಗಳು ತುಕ್ಕು ಹಿಡಿದು ರಿಪೇರಿ ಸ್ಥಿತಿಯಲ್ಲಿವೆ. ಗದ್ದೆಗಳಲ್ಲಿನ ವಿದ್ಯುತ್‌ ಕಂಬಗಳು ನೆಲಕ್ಕುರುಳಿ ರೈತರು ಗದ್ದೆಗಳಿಗೆ ಸಾಗಲೂ ಭಯಪಡುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.