ಬೆಳಗಾವಿ : ಸುವರ್ಣಸೌಧದಲ್ಲಿ ಡಿಸೆಂಬರ್ ತಿಂಗಳಲ್ಲಿ ಅಧಿವೇಶನ ನಡೆಯಲಿರುವ ಹಿನ್ನೆಲೆ ಎಡಿಜಿಪಿ ಪ್ರತಾಪ್ ರೆಡ್ಡಿ ಬೆಳಗಾವಿಗೆ(Belgavi) ಭೇಟಿ ನೀಡಿ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ(ADGP Pratap reddy)ಸುವರ್ಣಸೌಧಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದರು. ಈ ವೇಳೆ ಉತ್ತರ ವಲಯ ಐಜಿಪಿ ಸತೀಶ್‌ಕುಮಾರ್, ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್, ಎಸ್‌ಪಿ ಲಕ್ಷ್ಮಣ ನಿಂಬರಗಿ ಸೇರಿ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದರು.
ಸುವರ್ಣ ಸೌಧದ(Suvarnasoudha) ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಪ್ರತಾಪ್ ರೆಡ್ಡಿ ವೀಕ್ಷಣೆ ಮಾಡಿದರು. ಸುವರ್ಣಸೌಧದಲ್ಲಿ ಎಲ್ಲೆಲ್ಲಿ ಭದ್ರತೆ ನಿಯೋಜನೆ ಮಾಡಬೇಕು. ಪ್ರತಿಭಟನಾಕಾರರಿಗೆ ಧರಣಿ ಕೂರಲು ಎಲ್ಲಿ ವ್ಯವಸ್ಥೆ ಮಾಡಬೇಕು.
ಸಿಎಂ ಮತ್ತು ಸಚಿವರ ಭದ್ರತೆಗೆ ಪೊಲೀಸರ ನಿಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಅಧಿವೇಶನ ವೇಳೆ ಎಷ್ಟು ಜನ ಪೊಲೀಸರ ನಿಯೋಜನೆ ಮಾಡಬೇಕು ಎಂಬ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದನ್ನೂ ಓದಿ:ಜೆಡಿಎಸ್ ಮುಗಿಸಲು ಕಾಂಗ್ರೆಸ್ ನಾಯಕರ ಹುನ್ನಾರ ನಡೆಯುತ್ತಿದೆ : ಹೆಚ್ಡಿಕೆ ಆರೋಪ