ಬೆಳಗಾವಿ: ಯಾವುದೇ ಭಾಷೆ, ಕಲೆಗಳಿಗೆ ಗಡಿಗಳಿಲ್ಲ. ಯಾವುದೇ ವಿವಾದಗಳನ್ನು ಇವುಗಳಿಗೆ ತಳುಕು ಹಾಕಬಾರದು ಎಂದು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಶಿವಸೇನೆ ಕಾರ್ಯಕರ್ತರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಕೊಲ್ಲಾಪುರದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್ಗೆ ಶಿವಸೇನಾ ಕಾರ್ಯಕರ್ತರು ಅಡ್ಡಿಪಡಿಸಿದ್ದರು.
ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೇಶದಾದ್ಯಂತ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.
ಅಭಿಮಾನಿಯೊಬ್ಬ ಹೌದೋ ಹುಲಿಯಾ ಎಂದಾಗ ಸಿನಿತಂಡ ನಗೆಗಡಲಲ್ಲಿ ಮುಳುಗಿತು.
ಉತ್ತರ ಕರ್ನಾಟಕ ಭಾಷಾ ಶೈಲಿಯ ಸಿನಿಮಾ ಮಾಡುವ ಆಸೆ ಇದೆ. ಯಾವುದಾದರೂ ಒಳ್ಳೆ ಕಥೆ ಸಿಕ್ಕರೇ ಖಂಡಿತ ಮಾಡುತ್ತೇನೆ ಎಂದರು.
ನಿರ್ದೇಶಕ ಸಚಿನ್, ನಟರಾದ ಬಾಲಾಜಿ, ಪ್ರಮೋದ್ ಶೆಟ್ಟಿ ಇದ್ದರು.