ಬೆಳಗಾವಿ : ಮಹಾನಗರ ಪಾಲಿಕೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಕಾರ್ಯಕರ್ತನೊಬ್ಬ ಬಿಜೆಪಿ ನಾಯಕರ ವಿರುದ್ಧ ಅವಾಚ್ಯ ಶಬ್ಧಗಳಿಂದ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬೆಳಗಾವಿ ಉಸ್ತುವಾರಿ, ಶಾಸಕ ಅಭಯ್ ಪಾಟೀಲ 58 ವಾರ್ಡ್ಗಳ ಪೈಕಿ ಮೊದಲ ಹಂತದಲ್ಲಿ 21 ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಇದೀಗ ಬೆಳಗಾವಿ ಉತ್ತರ ಮತ್ತು ಮತಕ್ಷೇತ್ರದ ವಾರ್ಡ್ ನಂಬರ್ 35ರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಿನ್ನಮತ ಸ್ಫೋಟಗೊಂಡಿದೆ.
35ನೇ ವಾರ್ಡಿಗೆ ಬಿಜೆಪಿ ಲಕ್ಷ್ಮಿ ರಾಠೋಡ್ಗೆ ಟಿಕೆಟ್ ನೀಡಿದೆ. ಆದರೆ, ಭಾರತಿ ಸಂತೋಷ್ಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಭಾರತಿ ಸಹೋದರನಾದ ದತ್ತಾ ಬೀಲಾವರ್ ಎಂಬುವರು ಶಾಸಕ ಅನಿಲ್ ಬೆನಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಟಿಕೆಟ್ ಕೊಟ್ಟಿಲ್ಲ ಅಂದ್ರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಬಿಜೆಪಿ ಅಭ್ಯರ್ಥಿಯನ್ನು ನಾನು ಬಹಿರಂಗವಾಗಿ ವಿರೋಧಿಸುವುದಾಗಿ ಆಕ್ರೋಶ ಹೊರ ಹಾಕಿದರು.