ಚಿಕ್ಕೋಡಿ: ದ್ವಿತೀಯ ದರ್ಜೆ ಸಹಾಯಕ ಅಧಿಕಾರಿ ಸೇರಿ ಇಬ್ಬರೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.
ಚಿಂಚಲಿ ಪಟ್ಟಣದ ಮುಖ್ಯಾಧಿಕಾರಿ ಎಂ. ಜಿ. ಪೂಜಾರಿ ಹಾಗೂ ದ್ವಿತೀಯ ದರ್ಜೆ ಸಹಾಯಕ ಮಾರುತಿ ಗಾಡಿವಡ್ಡರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟೆಂಡರ್ ಬಿಲ್ ಪಾಸ್ ಮಾಡಿ ಚೆಕ್ ನೀಡಲು 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಾಗಾಗಿ ಖಾಸಗಿ ಕಂಪನಿಯವರ ಕಡೆಯಿಂದ ಹಣ ಪಡೆಯುವಾಗ ಮುಖ್ಯಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.