ಬೆಳಗಾವಿ: ಉಪಮುಖ್ಯ ವಿದ್ಯುತ್ ಪರಿವೀಕ್ಷಕ ಹಣಮಂತ ಚಿಕ್ಕಣ್ಣನವರ ಮನೆ ಮೇಲೆ ದಾಳಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ.
ಬೆಳಗಾವಿಯ ಚನ್ನಮ್ಮ ನಗರದಲ್ಲಿ ಭವ್ಯವಾದ ಡುಪ್ಲೆಕ್ಸ್ ಮನೆ, ಶಾಂತಿನಾಥ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್, ಒಂದು ಪೆಂಟ್ ಹೌಸ್, 4 ಅಂಗಡಿಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಒಂದು ಬಟ್ಟೆ ಅಂಗಡಿ, ಒಂದು ಎಲೆಕ್ಟ್ರಿಕ್ ಅಂಗಡಿಯೂ ಇವರ ಹೆಸರಲ್ಲಿರುವುದು ಗೊತ್ತಾಗಿದೆ.
ರೆಡಿಮೇಡ್ ಬಟ್ಟೆ ಅಂಗಡಿಯಲ್ಲಿ ಅಂದಾಜು 6,75,000 ಮೌಲ್ಯದ ಬಟ್ಟೆಗಳು, ಎಲೆಕ್ಟ್ರಿಕ್ ಅಂಗಡಿಯಲ್ಲಿ 65 ಲಕ್ಷ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಮನೆಯಲ್ಲಿ 816 ಗ್ರಾಂ ಚಿನ್ನಾಭರಣ, 6 ಕೆ.ಜಿ 317 ಗ್ರಾಂ ಬೆಳ್ಳಿ ಹಾಗೂ ಮನೆಯಲ್ಲಿ 1 ಲಕ್ಷ 88 ಸಾವಿರ ರೂ. ನಗದು ಪತ್ತೆಯಾಗಿದೆ.
ಹಣಮಂತ ಚಿಕ್ಕಣ್ಣನವರ ಅವರ ಮನೆ, ಕಚೇರಿ ಸೇರಿ ಏಕಕಾಲಕ್ಕೆ 4 ಕಡೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಳಗಾವಿ ಉತ್ತರ ವಲಯ ಎಸಿಬಿ ಎಸ್‌ಪಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: ಬೆಳಗಾವಿಯ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರ ಮನೆ ಮೇಲೆ ದಾಳಿ