ETV Bharat / state

ACB Raid : ಕೆಜಿಗಟ್ಟಲೇ ಚಿನ್ನ, ಕಂತೆ ಕಂತೆ ನೋಟು ಕಂಡು ದಂಗಾದ ಎಸಿಬಿ

ನಾತಾಜಿ ಪಾಟೀಲ್ ಮನೆಯಲ್ಲಿ ಅಪಾರ ಪ್ರಮಾಣದ ಪ್ಲಾಟಿನಂ ಆಭರಣಗಳು, ಚಿನ್ನದ ಒಡವೆಗಳು ಪತ್ತೆಯಾಗಿವೆ. ಸಹಕಾರಿ ಇಲಾಖೆ ಅಭಿವೃದ್ಧಿ ಅಧಿಕಾರಿ ಅಡವಿಸಿದ್ದೇಶ್ವರ ಮಾಸ್ತಿ ಮನೆಯಲ್ಲಿ 51 ಲಕ್ಷ ರೂ. ಮೌಲ್ಯದ ಚಿನ್ನಾಭರಣ‌ ಪತ್ತೆಯಾಗಿವೆ..

acb raid in belgavi
ಎಸಿಬಿ ದಾಳಿ ವೇಳೆ ಪತ್ತೆ
author img

By

Published : Nov 24, 2021, 4:47 PM IST

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯ ಮೂವರು ಅಧಿಕಾರಿಗಳ ಮನೆ-ಕಚೇರಿ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಕೆಜಿಗಟ್ಟಲೇ ಚಿನ್ನಾಭರಣ, ಕಂತೆ ಕಂತೆ ಲಕ್ಷಾಂತರ ಹಣ ಕಂಡು ದಂಗಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಮೋಟಾರ್ ವೈಹಿಕಲ್ ಇನ್ಸ್​​ಪೆಕ್ಟರ್ ಸದಾಶಿವ ಮರಲಿಂಗಣ್ಣವರ್,ಬೈಲಹೊಂಗಲ ಪಟ್ಟಣದಲ್ಲಿರುವ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಅಡಿವಿಸಿದ್ದೇಶ್ವರ ಮಾಸ್ತಿ ಹಾಗೂ ಬೆಳಗಾವಿ ವೈಭವ ನಗರದಲ್ಲಿರುವ ಹೆಸ್ಕಾಂ ಲೈನ್ ಮೆಕ್ಯಾನಿಕ್ ನಾತಾಜಿ ಪಾಟೀಲ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

acb raid in belgavi
ಎಸಿಬಿ ದಾಳಿ ವೇಳೆ ಪತ್ತೆಯಾದ ನಗದು-ಚಿನ್ನಾಭರಣಗಳು

ಆರ್‌ಟಿಒ ಇನ್ಸ್​​ಪೆಕ್ಟರ್ ಸದಾಶಿವ ಮನೆಯಲ್ಲಿ 1ಕೆಜಿ 135ಗ್ರಾಂ ಚಿನ್ನಾಭರಣ‌, 8 ಲಕ್ಷ 22ಸಾವಿರ ನಗದು, ಬೆಳ್ಳಿ ಪಾತ್ರೆಗಳು ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ACB Raid: ಗದಗ ಕೃಷಿ‌ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ₹15 ಲಕ್ಷ ನಗದು ಪತ್ತೆ

ನಾತಾಜಿ ಪಾಟೀಲ್ ಮನೆಯಲ್ಲಿ ಅಪಾರ ಪ್ರಮಾಣದ ಪ್ಲಾಟಿನಂ ಆಭರಣಗಳು, ಚಿನ್ನದ ಒಡವೆಗಳು ಪತ್ತೆಯಾಗಿವೆ. ಸಹಕಾರಿ ಇಲಾಖೆ ಅಭಿವೃದ್ಧಿ ಅಧಿಕಾರಿ ಅಡವಿಸಿದ್ದೇಶ್ವರ ಮಾಸ್ತಿ ಮನೆಯಲ್ಲಿ 51 ಲಕ್ಷ ರೂ. ಮೌಲ್ಯದ ಚಿನ್ನಾಭರಣ‌ ಪತ್ತೆಯಾಗಿವೆ.

ಅಲ್ಲದೇ ವಿವಿಧೆಡೆ ನಿವೇಶನ ಖರೀದಿಸಿದ ಬಗ್ಗೆಯೂ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆದಿದೆ. ಎಸಿಬಿ ಎಸ್​​ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ಪರಿಶೀಲನೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.