ಬೆಳಗಾವಿ: ಕಾನೂನು ಪರೀಕ್ಷೆಗಳ ಸಮಯದ ಅನಿಶ್ಚಿತತೆ ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡುವ ನಿಯಮಗಳನ್ನು ಸರಿಪಡಿಸುವಂತೆ, ಎಲ್ಲಾ ಕಾನೂನು ಕಾಲೇಜುಗಳಿಗೆ ಸರಿಯಾದ ಮಾರ್ಗಸೂಚಿಗಳನ್ನು ನೀಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಎಬಿವಿಪಿ ಸದಸ್ಯರು, ವಿಶ್ವವಿದ್ಯಾನಿಲಯವು ಪ್ರಸ್ತುತ ನೀಡಿರುವ ಮಾರ್ಗಸೂಚಿಗಳನ್ನು ನೋಡಿದರೆ, ಕಾನೂನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದ್ದಾರೆ. ಸಮಯವಿಲ್ಲದೆ ಎರಡು ಸೆಮಿಸ್ಟರ್ ಪರೀಕ್ಷೆಗಳ ದಿನಗಳು ಮತ್ತು ನಡವಳಿಕೆಗಳ ಬಗ್ಗೆ ಚಿಂತಿತರಾಗಿದ್ದಾರೆ. ಮಾದರಿಯ ಪರೀಕ್ಷೆಯ ಬಗ್ಗೆ ಸರಿಯಾದ ಮಾರ್ಗಸೂಚಿಗಳಿಲ್ಲ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯವು ಈಗಾಗಲೇ ಶೈಕ್ಷಣಿಕ ವರ್ಷದೊಂದಿಗೆ ವಿಳಂಬವಾಗಿದೆ. ಇತರ ವಿಶ್ವವಿದ್ಯಾಲಯಗಳು ಪಠ್ಯಕ್ರಮ ಮತ್ತು ಶೈಕ್ಷಣಿಕ ವಿಷಯದಲ್ಲಿ ಮುಂದಿವೆ. ಆದ್ದರಿಂದ ಪರೀಕ್ಷೆಯ ಪ್ರಾರಂಭದ 25 ದಿನಗಳ ಮೊದಲು ಸಮಯ ಕೋಷ್ಟಕವನ್ನು ನೀಡಬೇಕು. ಪರೀಕ್ಷೆಯ ಸೆಮಿಸ್ಟರ್ ಪ್ಯಾಟರ್ನ್ ಎರಡಕ್ಕೂ ಸಂಬಂಧಿಸಿದ ಗೊಂದಲವನ್ನು ಸ್ಪಷ್ಟವಾಗಿ ತಿಳಿಸಬೇಕು. ಸಮ ಮತ್ತು ಬೆಸ ಸೆಮಿಸ್ಟರ್ ಪರೀಕ್ಷೆಯ ನಡುವೆ 30 ದಿನಗಳ ಸಮಂಜಸವಾದ ಅಂತರವಿರಬೇಕು. ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕೆಗಳನ್ನು ವಿಶ್ವವಿದ್ಯಾಲಯವು ತಿಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಓದಿ : ನೇತಾಜಿ ಸುಭಾಷ್ ಚಂದ್ರ ಬೋಸ್ 125 ನೇ ಜನ್ಮದಿನ; ವೀರ ಸೇನಾನಿಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ