ETV Bharat / state

ಚಿಕ್ಕೋಡಿ: ಬಾಲಕನ ಪ್ರಾಣ ಉಳಿಸಲು ಹೋಗಿ ಸಾವನ್ನಪ್ಪಿದ ಯುವಕ - Krishna river

ಕಾಲು ಜಾರಿ ನದಿಗೆ ಬಿದ್ದಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿಯಲ್ಲಿ ನಡೆದಿದೆ.

A young man dead body found in Krishna river  at chikkodi
ಸಾವನ್ನಪ್ಪಿದ ಯುವಕ
author img

By

Published : Aug 12, 2021, 1:09 PM IST

ಚಿಕ್ಕೋಡಿ: ಮುಳುಗುತ್ತಿದ್ದ ಬಾಲಕನ‌ನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದ ಯುವಕನೊಬ್ಬನ ಶವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಬಳಿ ಪತ್ತೆಯಾಗಿದೆ.

ಕಳೆದ ಎರಡು ದಿನಗಳ ಹಿಂದೆ 10 ವರ್ಷದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಕೃಷ್ಣಾ ನದಿಯಲ್ಲಿ ಶರೀಪ್​ ಖಂಜಾಡೆ (34) ಕೊಚ್ಚಿ ಹೋಗಿದ್ದರು. ನಂತರ ಬಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಕೃಷ್ಣಾ ನದಿಯಲ್ಲಿ ಯುವಕನ ಶವ ಪತ್ತೆ

ಮೀನು ಹಿಡಿಯಲು ಬಂದಿದ್ದ ಶರೀಫ್, ಕಾಲು ಜಾರಿ ನದಿಗೆ ಬಿದ್ದಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಸಾವನ್ನಪ್ಪಿದ್ದರು. ಆತನನ್ನು ರಕ್ಷಣೆ ಮಾಡಲು ಸ್ಥಳೀಯರು ಎಷ್ಟೇ ಪ್ರಯತ್ನಿಸಿದ್ರೂ ಕೂಡ ನೀರಿನಲ್ಲಿ ತೇಲಿ ಹೋಗಿದ್ದರು.

ಕಳೆದ ಎರಡು ದಿನಗಳಿಂದ ಎನ್​ಡಿಆರ್​ಎಫ್​ ತಂಡ ಕಾರ್ಯಾಚರಣೆ ನಡೆಸಿದ್ದು, ಇಂದು ಬೆಳಗಿನ ಜಾವ ಶರೀಫ್‌​ ಶವ ಪತ್ತೆ ಹಚ್ಚಿದೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.