ETV Bharat / state

ಕೊರೊನಾ ಗೆದ್ದು ಬಂದ ಕುಡಚಿಯ ಮಹಿಳೆ: ಚಪ್ಪಾಳೆ ತಟ್ಟಿ ಸ್ವಾಗತಿಸಿದ ಸ್ಥಳೀಯರು! - woman recovering

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯಾಸ್ಮಿನ್​ ನವಾಜ್ ಎಂಬುವರಿಗೆ ಕೊರೊನಾ ಪಾಸಿಟಿವ್ ಇತ್ತು. ಈ ಹಿನ್ನೆಲೆ ಅವರು ಬೀಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ವಾಪಸ್​ ಆಗಿದ್ದಾರೆ.

ಕೊರೊನಾ ಗೆದ್ದುಬಂದ ಮಹಿಳೆ
ಕೊರೊನಾ ಗೆದ್ದುಬಂದ ಮಹಿಳೆ
author img

By

Published : Apr 21, 2020, 11:14 PM IST

ಚಿಕ್ಕೋಡಿ: ಕೊರೊನಾ ಸೋಂಕಿಗೆ ಒಳಗಾಗಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಂಪೂರ್ಣವಾಗಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಸ್ವಗ್ರಾಮ ಕುಡಚಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ತಾಲೂಕು ಆಡಳಿತದಿಂದ ಚಪ್ಪಾಳೆ ತಟ್ಟುವುದರ ಮೂಲಕ ಬರಮಾಡಿಕೊಳ್ಳಲಾಯಿತು.

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯಾಸ್ಮಿನ್​ ನವಾಜ್ ಎಂಬುವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆಗಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ 150ನೇ ಸೋಂಕಿತನಿಂದ ಕೊರೊನಾ ತಗುಲಿತ್ತು.

ಚಂದ್ರಕಾಂತ ಭಜಂತ್ರಿ , ರಾಯಬಾಗ ತಹಶೀಲ್ದಾರ್​

ತಾಲೂಕು ಆಡಳಿತ ಬೆಂಗಾವಲಿನೊಂದಿಗೆ ಪಟ್ಟಣಕ್ಕೆ ಆಗಮಿಸಿದ ಯಾಸ್ಮಿನ್ ನವಾಜ್ ಅವರನ್ನು ದಾರಿಯೂದಕ್ಕೂ ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಲಾಯಿತು. ಕುಡಚಿ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದರಿಂದ ಜನರಲ್ಲಿ ಭಯದ ದವಾತಾವರಣ ಮೂಡಿತ್ತು. ಆದರೆ, ಯಾಸ್ಮಿನ್​ ನವಾಜ್ ಕೊರೊನಾ ರೋಗದಿಂದ ಸಂರ್ಪೂಣವಾಗಿ ಮುಕ್ತರಾಗಿ ಬಂದಿದ್ದರಿಂದ ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ.

ಕೊರೊನಾ ಗೆದ್ದುಬಂದ ಮಹಿಳೆ
ಕೊರೊನಾ ಗೆದ್ದು ಬಂದ ಮಹಿಳೆ

ಹೆಚ್ಚುವರಿ ಎಸ್‍ಪಿ ಅಮರನಾಥ ರೆಡ್ಡಿ, ಅಥಣಿ ಡಿವೈಎಸ್‍ಪಿ ಎಸ್.ವಿ.ಗಿರೀಶ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣವರ, ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ, ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್.ಬಾನೆ, ಕುಡಚಿ ಪಿಎಸ್‍ಐ ಶಿವರಾಜ ಧರಿಗೌಡ, ಕುಡಚಿ ವೈದ್ಯಾಧಿಕಾರಿ ಸತೀಶ ಕಲ್ಲಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.