ಚಿಕ್ಕೋಡಿ : ಹೊಲ ಸಾಲ ಹಾಗೂ ಮಡ್ಡಿ ಸಮುದಾಯದ ಜನರ ನಡುವೆ ಜೀವನ ಶೈಲಿಯ ಬಗ್ಗೆ ವಿಡಿಯೋ ವಾರ್ ಶುರುವಾಗಿದ್ದು, ಎರಡೂ ಸಮುದಾಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೊಲಸಾಲ ಅಂದರೆ, ನದಿ ತೀರದಲ್ಲಿ ವಾಸಿಸುವ ಸಮುದಾಯ, ಮಡ್ಡಿ ಅಂದರೆ ನದಿ ತೀರದಿಂದ ದೂರದಲ್ಲಿ ವಾಸಿಸುವ ಸಮುದಾಯ. ಇದೀಗ ಇವೆರಡು ಸಮುದಾಯಗಳ ಮಧ್ಯೆ ತಮ್ಮ ತಮ್ಮ ಜೀವನ ಶೈಲಿಗೆ ಸಂಬಂಧಪಟ್ಟಂತೆ ವಿಡಿಯೋ ಸಮರ ಪ್ರಾರಂಭಗೊಂಡಿದ್ದು, ಎರಡು ಸಮುದಾಯದ ಜನರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಣಗಳಲ್ಲಿ ಹರಿದಾಡುತ್ತಿದೆ.
ಹೇಗೆ ಪ್ರಾರಂಭವಾಯಿತು ವಿಡಿಯೋ ವಾರ್?
ಕಳೆದ ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ ನದಿ ಉಕ್ಕಿ ಬಂದು ನದಿ ತೀರದ ಜನರು ಪ್ರವಾಹಕ್ಕೆ ತುತ್ತಾಗಿ ಅಪಾರ ಹಾನಿಗೊಳಗಾಗಿದ್ದಾರೆ. ಇದರಿಂದ ನದಿ ತೀರದಲ್ಲಿ ವಾಸಿಸುತ್ತಿರುವ ಹೊಲ ಸಾಲ ಸಮುದಾಯದ ಜನರು ನಮ್ಮ ಮಡ್ಡಿ ಭಾಗದಲ್ಲಿ ಆಸರೆ ಪಡೆಯುತ್ತಿದ್ದೀರಿ ಎಂದು ಹೇಳುವ ವಿಡಿಯೋ ಒಂದನ್ನು ಮಾಡಿ ಮಡ್ಡಿ ಸಮುದಾಯದವರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಹೊಲಸಾಲ ಜನರು, ಒಂದು ತಿಂಗಳು ಮಾತ್ರ ನಮಗೆ ಸಮಸ್ಯೆ ಎದುರಾಗುತ್ತದೆ. ನಮಗೆ ಯಾರ ಅವಶ್ಯಕತೆ ಇಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
ಒಟ್ಟಿನಲ್ಲಿ ಎರಡು ಸಮುದಾಯಗಳ ಮಧ್ಯೆ ಒಂದು ರೀತಿಯ ವಿಡಿಯೋ ಸಮರ ಏರ್ಪಟ್ಟಿದ್ದು, ಎರಡೂ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿವೆ.