ಬೆಳಗಾವಿ : ಕೊರೊನಾ ಸೋಂಕಿತನೊಬ್ಬ ಬಿಮ್ಸ್ ಆಸ್ಪತ್ರೆ ದುಸ್ಥಿತಿ ಕುರಿತು ಸಿಎಂ ಬಿಎಸ್‌ವೈ, ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲುಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ.
ಬಿಮ್ಸ್ ಆಸ್ಪತ್ರೆ ಸ್ಥಿತಿ ನೋಡಿದ್ರೆ ಮತ್ತೆ ಬೇರೆ ರೋಗ ಬರುವ ಲಕ್ಷಣ ಕಾಣುತ್ತಿದೆ. ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ ಎಂದು ಅಥಣಿ ತಾಲೂಕಿನ ಕೊರೊನಾ ಸೋಂಕಿತ ಯುವಕನೊಬ್ಬ ಸಿಎಂ ಹಾಗೂ ಸಚಿವರಿಗೆ ಟ್ವೀಟ್ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ.
ತಾಲೂಕಿನ ಹಾಲಭಾವಿಯಲ್ಲಿ ಎ ಸಿಂಪ್ಟಮೆಟಿಕ್ ರೋಗಿಗಳಿಗೆ ಪ್ರತ್ಯೇಕ 80 ಬೆಡ್ಗಳ ವ್ಯವಸ್ಥೆ ಮಾಡಿದ್ದಾರೆ. ಆದರೆ, ಅಲ್ಲಿಗೆ ಕೇವಲ 16 ರೋಗಿಗಳನ್ನು ಮಾತ್ರ ಶಿಫ್ಟ್ ಮಾಡಲಾಗಿದೆ. ಇನ್ನುಳಿದ ಎ ಸಿಂಪ್ಟಮೆಟಿಕ್ ಸೋಂಕಿತರನ್ನು ಅಲ್ಲಿಯೇ ಸ್ಥಳಾಂತರ ಮಾಡಬೇಕು ಎಂಬುವುದು ಈತ ಟ್ವೀಟ್ ಮೂಲಕ ಆಗ್ರಹಿಸಿದ್ದಾನೆ.