ETV Bharat / state

ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸಾವು.. ಗ್ರಾಮಸ್ಥರ ಆಕ್ರೋಶ, ಹೆಡ್​ಮಾಸ್ಟರ್ ಸಸ್ಪೆಂಡ್​ - ಶಾಲಾ ಆವರಣದಲ್ಲಿ ವಿದ್ಯುತ್​ ಶಾಕ್​ಗೆ ವಿದ್ಯಾರ್ಥಿನಿ ಬಲಿ

ಶಾಲಾ ಆವರಣದಲ್ಲಿ ವಿದ್ಯುತ್​ ತಂತಿ ತಗುಲಿ ವಿದ್ಯಾರ್ಥಿನಿ ಸಾವು- ಹೆಡ್​ಮಾಸ್ಟರ್​ ಅಮಾನತು- ನಿಪ್ಪಾಣಿ ತಾಲೂಕಿನಲ್ಲಿ ದುರ್ಘಟನೆ

student dies in school
ವಿದ್ಯಾರ್ಥಿನಿ ಸಾವು
author img

By

Published : Jul 5, 2022, 12:54 PM IST

Updated : Jul 5, 2022, 5:07 PM IST

ಚಿಕ್ಕೋಡಿ(ಬೆಳಗಾವಿ): ಶಾಲಾ ಆವರಣದಲ್ಲಿದ್ದ ವಿದ್ಯುತ್ ಕಂಬದಲ್ಲಿನ ತಂತಿ ತಗುಲಿ ಶಾಲೆಯಲ್ಲಿಯೇ ಒಂಬತ್ತು ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಡೋಣೆವಾಡಿ ಗ್ರಾಮದಲ್ಲಿ ನಡೆದಿದೆ. ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಯ ಅನುಷ್ಕಾ ಸದಾಶಿವ ಬೆಂಡೆ(9) ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದಾಳೆ.‌

ಘಟನೆಗೆ ಶಾಲೆಯ ಮುಖ್ಯಶಿಕ್ಷಕನ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಶಾಲೆಯ ಮುಖ್ಯಶಿಕ್ಷಕ ಕುಮಾರ್ ನಾಟೇಕರ್ ಅವರನ್ನ ಚಿಕ್ಕೋಡಿ ಡಿಡಿಪಿಐ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸ್ಥಳೀಯರು ಶಾಲೆಯ ಶೌಲಚಾಯದಲ್ಲಿರುವ ವಿದ್ಯುತ್ ಕಂಬದ ಸಹಾಯ ಪಡೆದು ತಮ್ಮ ಮನೆಗೆ ವಿದ್ಯುತ್ ಕಲ್ಪಿಸಿಕೊಂಡಿದ್ದರಂತೆ. ಮಳೆಗಾಲ ಹಿನ್ನೆಲೆ ಕಂಬದಲ್ಲಿನ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸಾವು

ಶಾಲಾ ಆಡಳಿತ ಮಂಡಳಿ ಹಾಗೂ ನಿಪ್ಪಾಣಿ ಬಿಇಒ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಶಾಲೆಯ ಮುಖ್ಯಶಿಕ್ಷಕ ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಹೊರ ಹೋಗಿದ್ದರಂತೆ. ಹೀಗಾಗಿ ಮುಖ್ಯ ಶಿಕ್ಷಕರ ಈ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ.. ಬೆಳಗಾವಿ: ವರುಣಾರ್ಭಟಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್‌ನಲ್ಲಿ ಗುಡ್ಡ ಕುಸಿತ

Last Updated : Jul 5, 2022, 5:07 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.