ಚಿಕ್ಕೋಡಿ: ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಮೂರ್ಛೆ ಹೋಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ.
ನೇಜ ಗ್ರಾಮದ ಶಿಲ್ಪಾ ಚನ್ನಗೌಡರ (34) ಸಾವನ್ನಪ್ಪಿರುವ ದುರ್ದೈವಿ. ಗ್ರಾಮದ ಹೊರವಲಯದಲ್ಲಿ ತೆರದ ಬಾವಿಯಲ್ಲಿ ಮಕ್ಕಳಾದ ಸುಜಲ ಮತ್ತು ಸುದರ್ಶನ ಎಂಬವರಿಗೆ ಈಜು ಕಲಿಸುವಾಗ ಮೂರ್ಛೆ ಹೋಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ತಾಯಿ ಮುಳುಗುತ್ತಿದ್ದಂತೆಯೇ ಕೂಗಾಡಿದ ಮಕ್ಕಳು, ತಾಯಿಯ ರಕ್ಷಣೆ ಮಾಡುವಂತೆ ಕೂಗಾಡಿ ನೆರೆ ಹೊರೆಯವರನ್ನು ಕರೆದಿದ್ದಾರೆ. ಆದರೆ ಜನರು ಬರೋದ್ರೊಳಗಾಗಿ ನೀರಲ್ಲಿ ಮುಳುಗಿ ತಾಯಿ ಸಾವನ್ನಪ್ಪಿದ್ದಾಳೆ.
ಈ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.