ETV Bharat / state

Food poisoning: ಚಿಕ್ಕೋಡಿ ಫುಡ್‌ ಪಾಯಿಸನ್ ಪ್ರಕರಣ.. ಓರ್ವ ಸಾವು - villagers ill after marriage food

ಚಿಕ್ಕೋಡಿ ಫುಡ್ ಪಾಯಿಸನ್​ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೇ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಚಿಕ್ಕೋಡಿ ಫುಡ್‌ ಪಾಯಿಸನ್ ಪ್ರಕರಣ
ಚಿಕ್ಕೋಡಿ ಫುಡ್‌ ಪಾಯಿಸನ್ ಪ್ರಕರಣ
author img

By ETV Bharat Karnataka Team

Published : Sep 5, 2023, 10:48 AM IST

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಆಗಸ್ಟ್ 28ರಂದು ಫುಡ್ ಪಾಯಿಸನ್ ಪ್ರಕರಣದಲ್ಲಿ ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಓರ್ವ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕೋಡಿ ಪಟ್ಟಣದ ಶಬ್ಬಿರ್​ ಮಕಾಂದಾರ (58) ಮೃತರು. ಕಳೆದ ತಿಂಗಳು ಆಗಸ್ಟ್ 28 ರಂದು ಹಿರೇಕೋಡಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭೋಜನದ ಬಳಿಕ 100ಕ್ಕೂ ಹೆಚ್ಚು ಜನ ವಾಂತಿ ಬೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಫುಡ್​ ಪಾಯಿಸನ್​ನಿಂದ ಜನರು ಅಸ್ವಸ್ಥರಾಗಿದ್ದರು.

ಘಟನೆ ಬಳಿಕ ಗ್ರಾಮದ ಸರ್ಕಾರಿ ಶಾಲೆಯನ್ನು ಆಸ್ಪತ್ರೆಯಾಗಿ ಪರಿವರ್ತನೆ ಮಾಡಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗಿತ್ತು. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿ ಸಮುದಾಯ ಆಸ್ಪತ್ರೆಗೆ 60 ಜನರನ್ನು ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಇಬ್ಬರನ್ನು ದಾಖಲು ಮಾಡಲಾಗಿತ್ತು. ಇದರಲ್ಲಿ ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇನ್ನೋರ್ವ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ವ್ಯಕ್ತಿಯಲ್ಲಿ ಕಣ್ಣಿನ ದೋಷ ಕಂಡುಬಂದಿದೆ. ಬಾಬಾಸಾಬ ಖುತುಬುದ್ದೀನ್ ಬೇಗ್ ಎಂಬವರ ಎರಡೂ ಕಣ್ಣುಗಳಲ್ಲಿ ದೋಷ ಕಂಡುಬಂದಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಅಸ್ವಸ್ಥ

ಬೆಳಗಾವಿ: ಮದುವೆ ಊಟ ಸವಿದು ಹಲವರು ಅಸ್ವಸ್ಥ ಪ್ರಕರಣ; ವ್ಯಕ್ತಿಯಲ್ಲಿ ಕಣ್ಣಿನ ದೋಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.