ಬೆಳಗಾವಿ: ವಿಪರೀತ ಹೊಟ್ಟೆ ನೋವು ತಾಳಲಾರಾದೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮದುರ್ಗ ತಾಲೂಕಿನ ರೇವಡಿಕೊಪ್ಪದಲ್ಲಿ ನಡೆದಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ರೇವಡಿಕೊಪ್ಪದ ಭೀಮಪ್ಪ ನಾಗಪ್ಪ ಜಕ್ಕನ್ನವರ್ (ಕೀಲಿಕೈ) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ಮೂಲತಃ ಗೊಣ್ಣಾಗರದ ನಿವಾಸಿಯಾಗಿದ್ದ ಇವರು 25 ವರ್ಷಗಳಿಂದ ರೇವಡಿಕೊಪ್ಪದ ಕೆಎಬಿಯಲ್ಲಿ ವಾಸವಾಗಿದ್ದರು. ಹಲವು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಯಾವುದೇ ಚಿಕಿತ್ಸೆಯು ಫಲಿಸದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ರಾಮದುರ್ಗದ ಸುರೇಬಾನ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.