ಅಥಣಿ: ಏಕಾಏಕಿ ಕಾರು ಅಡ್ಡ ಬಂದ ಪರಿಣಾಮ ಕಬ್ಬು ಸರಬರಾಜು ಮಾಡುವ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡ ಅಂಗಡಿ ಮುಂಭಾಗಕ್ಕೆ ಹೋಗಿ ಪಾದಚಾರಿ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಡೆದಿದೆ.
ಪಟ್ಟಣದ ಶಿವಾಜಿ ವೃತ್ತದ ಸಮೀಪದಲ್ಲಿಯೇ ಸಂಕೇಶ್ವರ - ಜೇವರ್ಗಿ ಹೆದ್ದಾರಿಯಲ್ಲಿ ಸಂಚರಿಸುವ ಕಬ್ಬು ಸಾಗಣೆ ಮಾಡುತ್ತಿರುವ ಟ್ರ್ಯಾಕ್ಟರ್ಗೆ ಕಾರ್ ಅಡ್ಡ ಬಂದ ಪರಿಣಾಮ ಚಾಲಕ ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸಿದ್ದು, ಒಬ್ಬ ಬೈಕ್ ಸವಾರ ಹಾಗೂ ಪಾದಚಾರಿ ಸ್ವಲ್ಪದರಲ್ಲಿ ಪಾರಾಗಿರುವ ಘಟನೆ ಸಂಭವಿಸಿದೆ.
ಟ್ರ್ಯಾಕ್ಟರ್ ಹಠಾತ್ತನೆ ನಿಯಂತ್ರಣ ತಪ್ಪಿ ಬೇಕರಿ ಅಂಗಡಿಗೆ ನುಗ್ಗಿದ ಪರಿಣಾಮ ಕೆಲವು ಕಾಲ ಭಯದ ವಾತಾವರಣ ಕೂಡಾ ನಿರ್ಮಾಣವಾಗಿತ್ತು. ಟ್ರ್ಯಾಕ್ಟರ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಭಯಾನಕ ದೃಶ್ಯಗಳು ಸೆರೆಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಓದಿ : ಮದ್ಯದ ಅಮಲಿನಲ್ಲಿ ಟ್ರಕ್ ಚಾಲನೆ: ಡ್ರೈವರ್ ಅಜಾಗರೂಕತೆಯಿಂದ ಮೂವರ ಸಾವು