ETV Bharat / state

ಸುವರ್ಣಸೌಧದತ್ತ ಪಂಚಮಸಾಲಿ ಸಮುದಾಯ ಪಾದಯಾತ್ರೆ: ಅಧಿವೇಶನದ ಎರಡನೇ ದಿನ ಸಾಲು ಸಾಲು ಪ್ರತಿಭಟನೆ - ಬೆಳಗಾವಿ ಅಧಿವೇಶನ

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಎರಡೂ ದಿನವೂ ಪ್ರತಿಭಟನೆ ಬಿಸಿ ತಟ್ಟಲಿದೆ. ತಮ್ಮ ಬೇಡಿಕೆ ಈಡೇರಿಸಲು ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲು ಹಲವು ಸಂಘಟನೆಗಳು ಮುಂದಾಗಿದ್ದು, ಇವತ್ತು ಒಟ್ಟು ಒಂಬತ್ತು ಪ್ರತಿಭಟನೆಗಳು ನಡೆಯುತ್ತಿವೆ.

Pamchamasali community Padayathre
ಪಂಚಮಸಾಲಿ ಸಮಾಜದ ಪಾದಯಾತ್ರೆಗೆ ಚಾಲನೆ
author img

By

Published : Dec 20, 2022, 9:07 AM IST

Updated : Dec 20, 2022, 12:22 PM IST

ಸುವರ್ಣಸೌಧದತ್ತ ಪಂಚಮಸಾಲಿ ಸಮಾಜದ ಪಾದಯಾತ್ರೆ

ಬೆಳಗಾವಿ: ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಕೂಡ ಸಾಲು ಸಾಲು ಪ್ರತಿಭಟನೆ ನಡೆಸಲು ರಾಜ್ಯದ ಮೂಲೆ ಮೂಲೆಯಿಂದ ಪ್ರತಿಭಟನಾಕಾರರು ಸುವರ್ಣಸೌಧದ ಕಡೆ ಆಗಮಿಸುತ್ತಿದ್ದಾರೆ. ಅದರಲ್ಲಿ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪಂಚಮಸಾಲಿ ಸಮಾಜ ಇಂದು ನಸುಕಿನ ಜಾವ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಕ್ರೀಡಾಂಗಣದಿಂದ ಎರಡನೇ ಹಂತದ ಪಾದಯಾತ್ರೆ ಆರಂಭಿಸಿದೆ.

2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ಪಂಚಮಸಾಲಿ ಸಮಾಜ ಮತ್ತೆ ಸರ್ಕಾರದ ಮೇಲೆ ಒತ್ತಡ ಹಾಕಲು ಇಂದು ಎರಡನೇ ಹಂತದ ಪಾದಯಾತ್ರೆಗೆ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದ್ದಾರೆ.

ಪಂಚಮಸಾಲಿ ಸಮಾಜದ ಹಲವು ಮುಖಂಡರು ಒಳಗೊಂಡು ಸಾವಿರರಾರು ಜನರೊಂದಿಗೆ ಶ್ರೀಗಳು ಪಾದಯಾತ್ರೆ ಆರಂಭಿಸಿದ್ದಾರೆ. ಮೂರು ದಿನದ ಪಾದಯಾತ್ರೆಯಲ್ಲಿ ಹಲವು ರಾಜಕೀಯ ಮುಖಂಡರು ಶ್ರೀಗಳಿಗೆ ಸಾಥ್ ನೀಡಲಿದ್ದಾರೆ. 22ರಂದು ಬೆಳಗಾವಿಗೆ ಪಂಚಮಸಾಲಿ ಸಮಾಜದ ಪಾದಯಾತ್ರೆ ತಲುಪಲಿದೆ. ನಂತರ ವಿರಾಟ್ ಪಂಚಮಸಾಲಿ ಶಕ್ತಿ ಪ್ರದರ್ಶನ ಬೃಹತ್ ಸಭೆ ಏರ್ಪಡಿಸಲಿದೆ.

ಅಧಿವೇಶನ ಎರಡನೇ ದಿನ ಇಂದು ಸಾಲು ಸಾಲು ಪ್ರತಿಭಟನೆ: ತಮ್ಮ ಬೇಡಿಕೆ ಈಡೇರಿಸಲು ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲು ಹಲವು ಸಂಘಟನೆಗಳು ಇಂದು ಕೂಡ ಮುಂದಾಗಿವೆ. ಇವತ್ತು ಒಟ್ಟು ಒಂಬತ್ತು ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರತಿಭಟನೆಕಾರರಿಗೆ ಸರ್ಕಾರ ಸೂಕ್ತ ಸ್ಥಳಾವಕಾಶ ಕಲ್ಪಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಬ್ಬು ಬೆಳೆಗೆ ನಿಗದಿತ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ. ಕರ್ನಾಟಕ ಕ್ಷತ್ರೀಯ ಮರಾಠ ಮಹಾ ಒಕ್ಕೂಟ, ವಿಲೀನ ವಂಚಿತ ವೃತ್ತಿ ಶಿಕ್ಷಣ ನೌಕರರ ಒಕ್ಕೂಟ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟ, ಕರ್ನಾಟಕ ದಾವಣಗೆರೆಯ ರಾಜ್ಯ ಪೌರ ಸೇವಾ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ನವ ಕರ್ನಾಟಕ ಗೌರವಧನ ಕಾರ್ಯಕರ್ತರ ಸಂಘ, ರಾಜ್ಯ ವೃತ್ತಿ ಪರ ನೇಕಾರರ ಹೋರಾಟ ಸಮಿತಿ ತಮ್ಮ ಬೇಡಿಕೆಯನ್ನು ಇಂದು ಪ್ರತಿಭಟನೆ ಮೂಲಕ ಸರ್ಕಾರದ ಮುಂದಿಡುತ್ತಿದೆ.

ಇದನ್ನೂ ಓದಿ: 2022 ರೌಂಡ್ ಅಪ್: ಹಲವು ಮಹತ್ವದ ಸರ್ಕಾರಿ ಆದೇಶಗಳಿಗೆ ಸಾಕ್ಷಿಯಾದ ರಾಜ್ಯ

Last Updated : Dec 20, 2022, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.