ETV Bharat / state

ಸಚಿವ ಸುರೇಶ್​ ಅಂಗಡಿ ಕಚೇರಿ ಬಳಿ ದಿನಸಿ ಕಿಟ್ ಸಿಗದೇ ಕಣ್ಣೀರು ಹಾಕಿದ 87 ವರ್ಷದ ವೃದ್ಧೆ! - Union Minister Suresh angadi

ಕೆಲ ದಿನಗಳಿಂದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿಯವರ ಬೆಳಗಾವಿ ಕಚೇರಿ ಬಳಿ ದಿನಸಿ ಕಿಟ್​ ವಿತರಿಸಲಾಗುತ್ತಿತ್ತು. ಆದರೆ ಇಂದು ಕಿಟ್​ ಪಡೆಯಲು ಆಗಮಿಸಿದ್ದ ವೃದ್ಧೆಯೊಬ್ಬರು ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

sdcs
ದಿನಸಿ ಕಿಟ್ ಸಿಗದೇ 87 ವರ್ಷದ ವೃದ್ಧೆ ಕಣ್ಣೀರು..!
author img

By

Published : Jun 5, 2020, 3:49 PM IST

ಬೆಳಗಾವಿ: ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇ‌ಶ್ ಅಂಗಡಿ ಅವರ ಕಚೇರಿಯಲ್ಲಿ ಉಚಿತ ದಿನಸಿ ಕಿಟ್ ನೀಡುತ್ತಿದ್ದಾರೆ ಎಂದು ಬಂದಿದ್ದ 87 ವರ್ಷದ ವೃದ್ಧೆಗೆ ಕಿಟ್ ಸಿಗದ ಪರಿಣಾಮ ಕಣ್ಣೀರು ಹಾಕಿದ ಘಟನೆ ನಡೆದಿದೆ.

ದಿನಸಿ ಕಿಟ್ ಸಿಗದೇ 87 ವರ್ಷದ ವೃದ್ಧೆ ಕಣ್ಣೀರು!

ಕಾರ್ಮಿಕ ಇಲಾಖೆ ವತಿಯಿಂದ ನಿನ್ನೆ 2 ಸಾವಿರ‌ಕ್ಕೂ ಹೆಚ್ಚಿನ ಕಿಟ್​​ಗಳನ್ನು ವಿತರಿಸಲಾಗಿತ್ತು. ಆದ್ರೆ ನಿನ್ನೆ ಎಲ್ಲರಿಗೂ ದಿನಸಿ ಕಿಟ್ ಸಿಗದಿರುವ ಪರಿಣಾಮ ಇನ್ನುಳಿದ ಜನರಿಗೆ ಇವತ್ತು ಬಂದವರಿಗೆ ಕಿಟ್ ಕೊಡಲಾಗುವುದು ಎಂದು ಹೇಳಿದ್ದರಂತೆ. ಅದಕ್ಕಾಗಿ ವಡಗಾವಿ ನಿವಾಸಿ ಯಲ್ಲವ್ವ ಢವಳೆ ಎಂಬ ವೃದ್ಧೆ ಕಿಟ್​ ಪಡೆಯಲು ಆಗಮಿಸಿದ್ದರು.

ಈ ವೇಳೆ ಕೇಂದ್ರ ಸಚಿವ ಸುರೇಶ್​ ಅಂಗಡಿಯವರ ಪಿಎ ಇಂದು ಕಿಟ್ ವಿತರಣೆ ಮಾಡುವುದಿಲ್ಲ ಎಂದಿದ್ದು, ಕಿಟ್ ಸಿಗದ ಕಾರಣ ವೃದ್ಧೆ ಕಣ್ಣೀರು ಹಾಕಿದ್ದಾರೆ. ಇವರಿಗೆ ಕಳೆದ ಒಂದು ವರ್ಷದಿಂದ ವೃದ್ಧಾಪ್ಯ ವೇತನ ಕೂಡ ಬಂದಿಲ್ಲ. ಹೀಗಾಗಿ ಕಿಟ್ ನೀಡುವಂತೆ ಕಣ್ಣೀರು ಹಾಕುತ್ತಾ ನಿರಾಸೆಯಿಂದ ವಾಪಸ್ ಮನೆಗೆ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.