ETV Bharat / state

ಚಿಕ್ಕೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 7 ಮಂದಿ ಹೆದ್ದಾರಿ ದರೋಡೆಕೋರರ ಬಂಧನ

ಹೈವೇಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 7 ಮಂದಿ ದರೋಡೆಕೋರರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 20 ಲಕ್ಷ ರೂ. ಮೌಲ್ಯದ ಅರಿಶಿಣ, ಎರಡು ಲಾರಿ, ಟ್ರ್ಯಾಕ್ಟರ್, ಎರಡು ಕಾರು ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ಅಂದಾಜು 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

author img

By

Published : Jun 16, 2020, 6:52 PM IST

7 gangsters arrested In Chikkodi
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ

ಚಿಕ್ಕೋಡಿ: ರಾತೋರಾತ್ರಿ ಹೈವೇಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 7 ಮಂದಿ ದರೋಡೆಕೋರರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ಗಣೇಶ ಕಲ್ಲಪ್ಪ ಕೋಳಿ, ದಾದಾಸಾಹೇಬ ಶಂಕರ ಟೋಣ್ಣೆ, ಜನಾರ್ಧನ ಘೆಂಡ, ಗುರುನಾಥ ಹಾಲಳ್ಳಿ, ಶಿವಾನಂದ ಪನದಿ, ಕಲೀಮ್ ಮಾಲದಾರ ಹಾಗೂ ಪಾಂಡುರಂಗ ಹಳ್ಳೂರ ಬಂಧಿತ ಆರೋಪಿಗಳು. ಈ ಕುರಿತು ಚಿಕ್ಕೋಡಿ ಪೊಲೀಸ್​ ​ಠಾಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಂ.ಚಿನ್ನಸ್ವಾಮಿ ಎಂಬುವವರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಲಾರಿ ಅಡ್ಡಗಟ್ಟಿ ಮಾಲು ಸಮೇತ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ಅ​ನ್ನು ಬಂಧಿಸಲಾಗಿದೆ. ಬಂಧಿತರಿಂದ 20 ಲಕ್ಷ ರೂ. ಮೌಲ್ಯದ ಅರಿಶಿಣ, ಎರಡು ಲಾರಿ, ಟ್ರ್ಯಾಕ್ಟರ್, ಎರಡು ಕಾರು ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಸೇರಿದಂತೆ ಒಟ್ಟು ಅಂದಾಜು 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಘಟನೆ ಹಿನ್ನೆಲೆ: ಜೂ. 7ರಂದು ತಮಿಳುನಾಡಿನ ಎಂ.ಚಿನ್ನಸ್ವಾಮಿ ಎಂಬುವರು ಅರಿಶಿಣ ತುಂಬಿಕೊಂಡು ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬರುವಾಗ ಕಬ್ಬೂರದಿಂದ 2 ಕಿ.ಮೀ. ದೂರದಲ್ಲಿ ದರೋಡೆಕೋರರು ಅಡ್ಡಗಟ್ಟಿದ್ದರು.‌ ಚಾಲಕ ಹಾಗೂ ಕ್ಲೀನರ್​ನನ್ನು ಅಪಹರಿಸಿಕೊಂಡು ಅಥಣಿ ತಾಲೂಕಿನ ಹಳ್ಳಿ ಬಳಿ ಕೈ-ಕಾಲು‌ ಕಟ್ಟಿ ಬಿಸಾಡಿದ್ದರು. ನಂತರ ಲಾರಿಯನ್ನು ಅಪಹರಿಸಿ 13 ಲಕ್ಷ ರೂ.‌ ಮೌಲ್ಯದ ಅರಿಶಿಣವನ್ನು ದರೋಡೆ ಮಾಡಿದ್ದರು. ಈ ಸಂಬಂಧ ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.