ಬೆಳಗಾವಿ/ಹಾಸನ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನದ ವೇಳೆ ದುರಂತ ನಡೆದಿದೆ. ಬೆಳಗಾವಿ ಮತ್ತು ಹಾಸನದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಬ್ಬ ವೃದ್ದೆ ಮತ್ತು ಇಬ್ಬ ಪುರುಷ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಝರ್ವಿಯಲ್ಲಿ ಬುಧವಾರ ಮತ ಚಲಾಯಿಸಲು ಬಂದಿದ್ದ ವೃದ್ದೆಯೊಬ್ಬರು ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 68 ವರ್ಷದ ಪಾರವ್ವ ಈಶ್ವರ ಸಿದ್ನಾಳ (ಪನದಿ) ಎಂಬುವವರೇ ಮೃತ ದುರ್ದೈವಿ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಾರವ್ವ ತಮ್ಮ ಹಕ್ಕು ಚಲಾಯಿಸಲು ಬಂದಿದ್ದರು. ಆದರೆ, ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮೃತರಾಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಯರಝರ್ವಿ ಗ್ರಾಮ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ.
ಹಾಸನದಲ್ಲಿ ವ್ಯಕ್ತಿ ಸಾವು: ಮತ್ತೊಂದೆಡೆ, ಹಾಸನ ಜಿಲ್ಲೆಯಲ್ಲಿ ಮತದಾನ ಮಾಡಿ ಹೊರ ಬರುತ್ತಿದ್ದಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜಯಣ್ಣ 49 ಎಂಬುವವರೇ ಮೃತ ವ್ಯಕ್ತಿಯಾಗಿದ್ದು, ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಯಣ್ಣ ತಮ್ಮ ಮತ ಹಕ್ಕು ಚಲಾಯಿಸಿ ಹೊರಗೆ ಬಂದಿದ್ದರು. ಈ ವೇಳೆ ಹೃದಯಾಘಾತ ಕಾಣಿಸಿಕೊಂಡು ಮತ ಕೇಂದ್ರದ ಆವರಣದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಗಾಂಧಿನಗರದಲ್ಲಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು