ETV Bharat / state

ಬೆಳಗಾವಿಯಲ್ಲಿ ಕೊರೊನಾ ಶಾಕ್: ಪದವಿ ಕಾಲೇಜಿನ 6 ಸಿಬ್ಬಂದಿಗೆ ಪಾಸಿಟಿವ್ - ಬೆಳಗಾವಿ ಕಾಲೇಜು ಸಿಬ್ಬಂದಿಗೆ ಕೊರೊನಾ

belagavi-deree-college corona
ಪದವಿ ಕಾಲೇಜಿನ 6 ಸಿಬ್ಬಂದಿಗೆ ಪಾಸಿಟಿವ್
author img

By

Published : Nov 20, 2020, 9:04 AM IST

Updated : Nov 20, 2020, 10:29 AM IST

08:55 November 20

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಗೊಂಡಿದ್ದು, ಪದವಿ ಕಾಲೇಜುಗಳ ಪ್ರಾರಂಭಗೊಂಡ ಬೆನ್ನಲ್ಲೇ, ವಿವಿಧ ಕಾಲೇಜಿನ 6 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಬೆಳಗಾವಿ: ರಾಜ್ಯಾದ್ಯಂತ ಪದವಿ ಕಾಲೇಜು ಆರಂಭಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಪದವಿ ಕಾಲೇಜಿನ ಒಟ್ಟು 6 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.  

ನವೆಂಬರ್ 17ರಂದು 671 ಕಾಲೇಜು ಸಿಬ್ಬಂದಿ, ನ.18 ರಂದು 656, ನ.19ರಂದು 699 ಕಾಲೇಜು ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಒಟ್ಟು 2026 ಕಾಲೇಜು ಸಿಬ್ಬಂದಿ ಪೈಕಿ 250 ಜನರ ವರದಿ ಬಂದಿದ್ದು, ಈ ಪೈಕಿ ಆರು ಕಾಲೇಜು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.  

ಇನ್ನುಳಿದಂತೆ 1,776 ಸಿಬ್ಬಂದಿಯ ಕೋವಿಡ್ ವರದಿ ಬರುವುದು ಬಾಕಿ ಇದೆ. ಈ ಎಲ್ಲ ಸಿಬ್ಬಂದಿ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜು ಆವರಣಕ್ಕೆ ತೆರಳಿ ಪಡೆದುಕೊಂಡಿದ್ದರು.  

Last Updated : Nov 20, 2020, 10:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.