ETV Bharat / state

ಬೆಳಗಾವಿಯಲ್ಲಿ 72 ವರ್ಷದ ವೃದ್ಧ ಸೇರಿ ಮೂವರಿಗೆ ಅಂಟಿದ ಕೊರೊನಾ ಸೋಂಕು!

ಕುಂದಾನಗರಿಯಲ್ಲಿ ಕೊರೊನಾ ತಕ್ಕ ಮಟ್ಟಿಗೆ ತಣ್ಣಗಾದಂತೆ ಕಂಡು ಬಂದಿದೆ. ಇಂದು ಮೂವರಲ್ಲಿ ಸೋಂಕು ದೃಢವಾಗಿದ್ದು, ಇದಲ್ಲದೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 362 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

3 More corona positive reported in Belagavi..including 72 years old man
ಬೆಳಗಾವಿಯಲ್ಲಿ 72 ವರ್ಷದ ವೃದ್ಧ ಸೇರಿ ಮೂವರಿಗೆ ಅಂಟಿದ ಕೊರೊನಾ ಸೋಂಕು
author img

By

Published : Jul 12, 2020, 12:07 AM IST

ಬೆಳಗಾವಿ: ಜಿಲ್ಲೆಯಲ್ಲಿ ಇಂದು 72 ವರ್ಷದ ವೃದ್ಧ ಸೇರಿ ಮೂವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಸೋಂಕಿತರ ಸಂಖ್ಯೆ 468ಕ್ಕೆ ಏರಿಕೆ ಕಂಡಿದೆ.

ಜಿಲ್ಲೆಯಲ್ಲಿ ಇಂದು ಪತ್ತೆಯಾದ ಮೂವರು ಸೋಂಕಿತರಲ್ಲಿ ಇಬ್ಬರು ಗೋಕಾಕ್ ಹಾಗೂ ಒಬ್ಬರು ಅಥಣಿ ತಾಲೂಕಿನವರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 468ಕ್ಕೇರಿದ್ದು ಇದರಲ್ಲಿ 362 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ಅಲ್ಲದೆ ಈವರೆಗೆ ಒಟ್ಟು 9 ಜನ ಮೃತಪಟ್ಟಿದ್ದಾರೆ‌. ಇನ್ನು ಜಿಲ್ಲೆಯಲ್ಲಿ 97 ಪ್ರಕರಣಗಳು ಸಕ್ರಿಯವಾಗಿವೆ. ಇದಲ್ಲದೇ 31,237 ಜನರು ನಿಗಾದಲ್ಲಿದ್ದರೆ, 6,170 ಜನರು 14 ದಿನದ ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ.

ಇವರಲ್ಲದೆ 9,990 ಜನರು 14 ದಿನದ ಹೋಮ್​​ ಕ್ವಾರಂಟೈನ್ ಅವದಿ ಮುಗಿಸಿದ್ದಾರೆ. 14,952 ಜನರು 28 ದಿನದ ಹೋಮ್ ಕ್ವಾರಂಟೈನ್ ಮುಗಿಸಿದ್ದು, 29,941 ಜನರ ಗಂಟಲು‌ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಅದರಲ್ಲಿ 26,608 ನೆಗಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್​​ನಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.