ETV Bharat / state

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಐದು ತಿಂಗಳ ಹಸುಗೂಸು ಸೇರಿ ದಂಪತಿ ದುರ್ಮರಣ

author img

By

Published : Oct 17, 2020, 6:00 PM IST

Updated : Oct 17, 2020, 6:55 PM IST

ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್​ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದರಿಂದ ಐದು ತಿಂಗಳ ಹಸುಗೂಸು ಸೇರಿದಂತೆ ದಂಪತಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

3 Killed In Road Accident At Belagavi
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಐದು ತಿಂಗಳ ಹಸುಗೂಸು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ನಡೆದಿದೆ.

ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸದಾಶಿವ ದುರ್ಗಪ್ಪ ಗಾಣಿಗೇರ (35), ಸಕ್ಕುಬಾಯಿ ಸದಾಶಿವ ಗಾಣಿಗೇರ (30) ಹಾಗೂ ಈ ದಂಪತಿಯ ಐದು ತಿಂಗಳ ಪುತ್ರಿ ದೃಷ್ಟಿ ಸದಾಶಿವ ಗಾಣಿಗೇರ ಮೃತ ದುರ್ದೈವಿಗಳು.

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ

ಹುಕ್ಕೇರಿಯಿಂದ ಸಂಗನಕೇರಿ ಮಾರ್ಗವಾಗಿ ಹಿಡಕಲ್ ಗ್ರಾಮಕ್ಕೆ ಈ ಕುಟುಂಬ ಬೈಕಿನ ಮೇಲೆ ತೆರಳುತ್ತಿತ್ತು. ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತರ ಶವಗಳನ್ನು ಗೋಕಾಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Oct 17, 2020, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.