ಅಥಣಿ (ಬೆಳಗಾವಿ): ರಾಜ್ಯದಲ್ಲಿ ಮೀಸಲಾತಿ ನೀಡಬೇಕೆಂದು ಹಲವಾರು ಸಮಾಜದ ಮಠಾಧೀಶರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮರಾಠಾ ಸಮಾಜದಕ್ಕೂ ಮೀಸಲಾತಿ ನೀಡಬೇಕೆಂದು ಸಚಿವ ಶ್ರೀಮಂತ ಪಾಟೀಲ್ ಅಚ್ಚರಿ ಹೇಳಿಕೆ ವ್ಯಕ್ತಪಡಿಸಿದ್ದಾರೆ.
ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತಾ, ಸದ್ಯ ರಾಜ್ಯದಲ್ಲಿ ಮೀಸಲಾತಿ ಕಾವು ಹೇಚ್ಚಾಗಿದೆ. ಇದರಿಂದಾಗಿ ಯಾರಿಗೆ ನೀಡಬೇಕೆಂದು ಗೊಂದಲ ಉಂಟಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅತಿ ಹಿಂದುಳಿದ ಮರಾಠ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ, ರಾಜಕೀಯವಾಗಿ ಹಿಂದುಳಿದಿದೆ. ಇದರಿಂದಾಗಿ ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಬಳಿ ಮನವಿ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ನಾವು ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಮನವಿ ಮುಖಾಂತರ ಪಡೆದುಕೊಳ್ಳುತೆವೆ ಎಂದು ತಿಳಿಸಿದರು.