ಚಿಕ್ಕೋಡಿ : ಬುಲೆರೋ ವಾಹನ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೊರವಲಯದ ಗಡಹಿಂಗ್ಲಜ್ ರಸ್ತೆಯ ಬಳಿ ನಡೆದಿದೆ.
ಮೃತರನ್ನು ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಗಂಡಹಿಂಗ್ಲಜ್ ತಾಲೂಕಿನ ಹೊಳಿಇಟ್ನಿಯ ಬಾಳಪ್ಪ ಬೀಮಪ್ಪ ಜಕನ್ನವರ (24) ಹಾಗೂ ಹುಕ್ಕೇರಿ ತಾಲೂಕಿನ ನೇರಲೆ ಗ್ರಾಮದ ಮಂಜುನಾಥ ಗುರವ (27) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಸಂಕೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.