ಅಥಣಿ: ಪಟ್ಟಣದಲ್ಲಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಿಂದ ಆದರ್ಶ ಅಪ್ಪ-ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಸ್ಥೆಯ 11ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ 10ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ 10 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶ್ರೇಯಾ ದಾನಪ್ಪನವರ ರಚಿಸಿದ ಮನದಾಳ ತಿಳಿದಾಗ ಎಂಬ ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುರೇಶ ಚಿಕ್ಕಟ್ಟಿ ಮಾತನಾಡಿ, ಇಲ್ಲಿಗೆ ಬಂದಿರುವ ಎಲ್ಲಾ ಪಾಲಕರು ಆದರ್ಶ ಅಪ್ಪ ಅಮ್ಮಂದಿರೆ. ತಮ್ಮ ಮಕ್ಕಳು ನಡೆದುಕೊಂಡ ನಡತೆ ಹಾಗೂ ಸಭ್ಯತೆಗೆ ಅನುಗಣವಾಗಿ ಸಾಂಕೇತಿಕವಾಗಿ ಆದರ್ಶ ಅಪ್ಪ ಅಮ್ಮ ಪ್ರಶಸ್ತಿ ಪ್ರದಾನ ಮಾಡುತ್ತಿರುವುದಾಗಿ ತಿಳಿಸಿದರು.
ಕುಡಚಿ ಶಾಸಕ ಪಿ.ರಾಜೀವ್ ಮಾತನಾಡಿ, ನೀರಿನಲ್ಲಿ ಜನಿಸಿರುವ ಮೀನಿನ ಮರಿಗೆ ಯಾರು ಈಜು ಕಲಿಸುವುದಿಲ್ಲ, ಕಾಗೆ ಗೂಡಿನಲ್ಲಿ ಮೊಟ್ಟೆ ಇಡಲು ಕೋಗಿಲೆಗೆ ಯಾರೂ ಹೇಳುವುದಿಲ್ಲ. ನಿಸರ್ಗ ಅವುಗಳಿಗೆ ಎಲ್ಲ ಸಂಗತಿಗಳನ್ನು ತುಂಬಿರುತ್ತದೆ. ಹಾಗೆ ಮಗುವಿಗೆ ಪ್ರೀತಿ ಮಮತೆ ಮೊದಲು ತೋರಿಸಬೇಕು ಎಂದು ತಿಳಿಸಿದರು.