ETV Bharat / state

ಒಂದೇ ವಾರದಲ್ಲಿ ಒಂದೇ ಕುಟುಂಬದ 10 ಎಮ್ಮೆಗಳ ನಿಗೂಢ ಸಾವು

author img

By

Published : Mar 16, 2021, 8:53 PM IST

ಬೆಳಗಾವಿ ತಾಲೂಕಿನ ಟಿಳಕವಾಡಿ ಗವಳಿ ಗಲ್ಲಿಯಲ್ಲಿ ಒಂದು ವಾರದ ಅವಧಿಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಸುಮಾರು 10 ಎಮ್ಮೆಗಳು ಸಾವನ್ನಪ್ಪಿವೆ.

10 buffaloes dies  in the same family
ಎಮ್ಮೆಗಳ ನಿಗೂಢ ಸಾವು

ಬೆಳಗಾವಿ: ತಾಲೂಕಿನ ಟಿಳಕವಾಡಿ ಗವಳಿ ಗಲ್ಲಿಯ ಒಂದೇ ಕುಟುಂಬದಲ್ಲಿ ಕಳೆದ ಒಂದು ವಾರದಲ್ಲಿ 10 ಎಮ್ಮೆಗಳು ನಿಗೂಢವಾಗಿ ಮೃತಪಟ್ಟ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ತಾಲೂಕು ಪಶು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಮ್ಮೆಗಳ ನಿಗೂಢ ಸಾವು
ಟಿಳಕವಾಡಿ ಗವಳಿ ಗಲ್ಲಿಯಲ್ಲಿ ಹೈನುಗಾರಿಕೆ ಮಾಡುತ್ತಿದ್ದ ಪಿರಾಜಿ ರಾಮಜಿ ಗವಳಿ ಎಂಬುವವರ ಮಾಲೀಕತ್ವದ 10 ಎಮ್ಮೆಗಳು ಒಂದು ವಾರದ ಅವಧಿಯಲ್ಲಿ ನಿಗೂಢವಾಗಿ ಮೃತಪಟ್ಟಿವೆ. ಇವತ್ತು ಒಂದೇ ದಿನ ಮೂರು ಎಮ್ಮೆಗಳು ಸಾವನ್ನಪ್ಪಿವೆ‌. ಹೈನುಗಾರಿಕೆ ಉದ್ಯಮವನ್ನು ನಂಬಿ ಜೀವನ ನಡೆಸುತ್ತಿದ್ದ ಕುಟುಂಬವೀಗ ಎಮ್ಮೆಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಇವತ್ತು ಕೂಡ ಒಂದೇ ದಿನ 3 ಎಮ್ಮೆಗಳು ಮೃತಪಟ್ಟಿದ್ದು, ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಮಲ್ಲಪ್ಪ ರಾವುತಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈಗಾಗಲೇ 5 ಎಮ್ಮೆಗಳ ರಕ್ತ ಸೇರಿ ಎಲ್ಲ ರೀತಿಯ ಪರೀಕ್ಷೆ ನಡೆಸಲಾಗಿದ್ದು, ಎಮ್ಮೆಗಳು ಶ್ವಾಸಕೋಶ ಸಂಬಂಧಿ ರೋಗದಿಂದ ಬಳಲುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೂ ಎಮ್ಮೆಗಳ ರಕ್ತದ ಮಾದರಿಯನ್ನು ಪ್ರಾದೇಶಿಕ ಡಯಾಗ್ನೋಸ್ಟಿಕ್ ಲ್ಯಾಬ್‍ಗೆ ಪರೀಕ್ಷಿಸಲು ಕಳುಹಿಸಲಾಗಿದೆ. ವರದಿ ನೋಡಿಕೊಂಡು ಹಿರಿಯ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಏನು ಮಾಡಬೇಕು ಎಂಬುದನ್ನು ತಿಳಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯ ತಂದೆಯಿಂದ ಕಿಡ್ನಾಪ್ ಕೇಸ್ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.