ETV Bharat / state

ಘಟಪ್ರಭಾ ಜಲಾಶಯದಿಂದ ಕೃಷ್ಣೆಗೆ 1ಟಿಎಂಸಿ ನೀರು.. ಅದು ಬಂದು ತಲುಪೋವಷ್ಟರಲ್ಲೇ ಇದೆ!

ಕಳೆದ 3 ತಿಂಗಳಿನಿಂದ ಬತ್ತಿ ಹೋಗಿರುವ ಉತ್ತರ ಕರ್ನಾಟಕದ ಕೃಷ್ಣ ನದಿಗೆ, ಘಟಪ್ರಭೆಯಿಂದ ನೀರು ಹರಿಸುವ ಪ್ರಯತ್ನ ನಡೆದಿದ್ದು, ಇದೀಗ ಬರೀ ಒಂದು ಟಿಎಂಸಿ ನೀರನ್ನು ಹರಿಸಲಾಗಿದೆ. ಇದರಿಂದ ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಘಟಪ್ರಭಾ ಜಲಾಶಯದಿಂದ ಕೃಷ್ಣಾ ನದಿಗೆ 1ಟಿಎಂಸಿ ನೀರು
author img

By

Published : Jun 2, 2019, 11:50 PM IST

ಚಿಕ್ಕೋಡಿ : ಕಳೆದ 3 ತಿಂಗಳಿನಿಂದ ಬತ್ತಿ ಹೋಗಿರುವ ಉತ್ತರ ಕರ್ನಾಟಕದ ಕೃಷ್ಣಾ ನದಿಗೆ ಘಟಪ್ರಭೆಯಿಂದ ಇದೀಗ ಬರೀ ಒಂದು ಟಿಎಂಸಿ ನೀರನ್ನು ಹರಿಸಲಾಗಿದೆ. ಇದರಿಂದ ಅಲ್ಲಿನ ಸ್ಥಳೀಯ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೃಷ್ಣಾ‌ನದಿ ಬತ್ತಿ ಹೋಗಿದ್ದರಿಂದ ಘಟಪ್ರಭೆಯ ನೀರನ್ನ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ‌ ಹರಿಸಬೇಕು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿತ್ತು. ಅದರಂತೆ ಕಾಲುವೆಗೆ ನೀರು ಸಹ ಹರಿಯ ಬಿಡಲಾಗಿದೆ. ಬರೋಬ್ಬರಿ 94 ಕಿ.ಮೀ ದೂರ ನೀರು ಬಂದು ಕೃಷ್ಣೆಯ ಒಡಲು ಸೇರಬೇಕು. ನೀರು ಹರಿಯುವ ದಾರಿಯಲ್ಲಿ ಸಣ್ಣ ಕಾಲುವೆಗಳು ಮತ್ತು ಚಿಕ್ಕ ಹಳ್ಳಗಳು ಸೇರಿವೆ.

ಘಟಪ್ರಭಾ ಜಲಾಶಯದಿಂದ ಕೃಷ್ಣಾ ನದಿಗೆ 1ಟಿಎಂಸಿ ನೀರು

ಅಧಿಕಾರಿಗಳ ನಿರ್ಲಕ್ಷತನದಿಂದ ಕೃಷ್ಣೆಯ ಒಡಲು ಸೇರಬೇಕಿದ್ದ‌ ನೀರು ಕೆಲ ಪ್ರಭಾವಿ ರೈತರ ಗದ್ದೆ ಸೇರ್ತಿದೆ. ರಾತ್ರಿ ಹೊತ್ತು ಕಾಲುವೆಗಳಿಗೆ ಜನರೇಟರ್​ ಮೂಲಕ ಇಲ್ಲಿನ ಪ್ರಭಾವಿ ನಾಯಕರು ತಮ್ಮ ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿರುವುದರಿಂದ ಕೃಷ್ಣಾ ನದಿಗೆ ಬಂದು ತಲುಪಬೇಕಾದ ನೀರಿನ ಪ್ರಮಾಣ ಕಡಿಮೆಯಾಗಿದೆ.

ಇತ್ತ ಅಥಣಿಯಲ್ಲಿ ಕಳೆದ 13 ದಿನಗಳಿಂದ ಕೃಷ್ಣ ನದಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಕೆಲ ರೈತರು ಆಡೋ ಆಟಗಳಿಂದಾಗಿ ನದಿಗೆ ನೀರು ಸಿಗದೆ ಸರ್ಕಾರದ ಯತ್ನ ವಿಫಲವಾಗಿದೆ. ಈ ಬಗ್ಗೆ ಹಿಡ್ಕಲ ಜಲಾಶಯದ ಜ್ಯೂನಿಯರ್ ಇಂಜಿನಿಯರ್​ ಎಸ್ ಆರ್ ಕಾಮತರನ್ನು ಕೇಳಿದ್ರೇ, ಯಾವುದೇ ರೀತಿ ತೊಂದರೆ ಆಗಿಲ್ಲ. ಒಂದು ವೇಳೆ ತೊಂದರೆ ಆಗಿದ್ದರೂ ಕೂಡಾ ನಮ್ಮ ಸಿಬ್ಬಂದಿ ತೆರವುಗೊಳಿಸಿದ್ದಾರೆ ಅಂತಾರೆ.

Intro:ಘಟಪ್ರಭಾ ಜಲಾಶಯದಿಂದ ಕೃಷ್ಣಾ ನದಿಗೆ, 1ಟಿಎಂಸಿ ನೀರು ಬಿಡುವ ಲೆಕ್ಕಕ್ಕೆ ಲೆಕ್ಕಾನೇ ಇಲ್ಲ
Body:
ಚಿಕ್ಕೋಡಿ :
ಪ್ಯಾಕೇಜ್

ಕೃಷ್ಣಾ‌ನದಿ ಬತ್ತಿ ಹೋಗಿದ್ದರಿಂದ ಘಟಪ್ರಭೆಯ ನೀರನ್ನ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ‌ ಹರಿಸಬೇಕು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿತ್ತು ಅದರಂತೆ ಕಾಲುವೆಗೆ ನೀರು ಸಹ ಹರಿದು ಬಿಡಲಾಗಿದೆ. ಆದರೆ, ಕೃಷ್ಣೆಯ ಒಡಲು ತಲುಪಿದ್ದು ಮಾತ್ರ ಅರೆಕಾಸಿನ ಮಜ್ಜಿಗೆಯಷ್ಟು. ಅರೆ ಒಂದು ಟಿಎಂಸಿ ನೀರು ಹರಿಸಿದ್ರು ಯಾಕೆ ನೀರು ತಲುಪಲಿಲ್ಲ ಅಂತೀರಾ ಈ ಸ್ಟೋರಿ ನೋಡಿ.

ಹೌದು ಕಳೆದ 3 ತಿಂಗಳಿನಿಂದ ಬತ್ತಿ ಹೋಗಿರುವ ಉತ್ತರ ಕರ್ನಾಟಕದ ದೊಡ್ಡ ನದಿ ಕೃಷ್ಣೆಗೆ ಘಟಪ್ರಭೆಯಿಂದ ನೀರು ಹರಿಸಿ, ಕೃಷ್ಣೆಯ ಒಡಲ ಮಕ್ಕಳ ದಾಹವನ್ನ ನೀಗಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ಹರಿಸಿದ ಒಂದು ಟಿಎಂಸಿ ನೀರಲ್ಲಿ ಕೃಷ್ಣೆಯ ಒಡಲು ಸೇರಿದ್ದು ಅರೆಕಾಸಿನ ಮಜ್ಜಿಗೆಯಷ್ಟು ಮಾತ್ರ.

ಬರೊಬ್ಬರಿ 94 ಕಿ.ಮೀ ದೂರ ನೀರು ಬಂದು ಕೃಷ್ಣೆಯ ಒಡಲು ಸೇರಬೇಕಾದರೆ ಈ 94 ಕಿ.ಮೀ ದೂರದ ಪಯಣದಲ್ಲಿ ಕಾಲುವಗೆ ಅಲ್ಲಲ್ಲಿ ಸಣ್ಣ ಕಾಲುವೆಗಳು ಮತ್ತು ಚಿಕ್ಕ ಹಳ್ಳಗಳು ಬರ್ತವೆ. ಸದ್ಯ ಅಧಿಕಾರಿಗಳ ನಿರ್ಲಕ್ಷತನದಿಂದ ಕೃಷ್ಣೆಯ ಒಡಲು ಸೇರಬೇಕಿದ್ದ‌ ನೀರು ಕೆಲ ಪ್ರಭಾವಿ ರೈತರ ಗದ್ದೆ ಸೇರ್ತಿವೆ. ರಾತ್ರಿ ಹೊತ್ತು ಕಾಲುವೆಗಳಿಗೆ ಜನರೇಟರ ಮೂಲಕ ಇಲ್ಲಿನ ಪ್ರಭಾವಿ ನಾಯಕರು ತಮ್ಮ ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿರುವುದರಿಂದ ಮುಂದೆ ಕೃಷ್ಣಾ ನದಿಗೆ ಬಂದು ತಲುಪಬೇಕಾದ ನೀರು ಮಾತ್ರ ಬರಲಿಲ್ಲ.

ಇತ್ತ ಅಥಣಿಯಲ್ಲಿ ಕಳೆದ 13 ದಿನಗಳಿಂದ ಇದೆ ಕೃಷ್ಣೆಯ ನೀರಿಗಾಗಿ ಹೋರಾಟ ನಡೆಯುತ್ತಿದ್ದರೆ ಇತ್ತ ಕೆಲ ರೈತರು ಆಡೋ ಆಟಗಳಿಂದಾಗಿ ನದಿಗೆ ನೀರು ಸಿಗದೆ ಸರ್ಕಾರದ ಯತ್ನ ವಿಫಲವಾಗಿದೆ. ಈ ಬಗ್ಗೆ ಹಿಡ್ಕಲ ಜಲಾಶಯದ ಜುನಿಯರ್ ಇಂಜಿನಿಯರ್ನ ಕೇಳಿದ್ರೆ ಅವರು ಹೇಳೋದು ಯಾವುದೇ ರೀತಿ ತೊಂದರೆ ಆಗಿಲ್ಲ. ಒಂದು ವೇಳೆ ತೊಂದರೆ ಆಗಿದ್ದರು ಕೂಡಾ ನಮ್ನ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ ತೊಂದರೆ ಆಗದಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಆಯೋಜನೆ ಮಾಡಿದ್ದಾರೆ ಎಂದು ಹಿಡ್ಕಲ ಜಲಾಶಯ ಜೂನಿಯರ್ ಇಂಜಿನಿಯರ್ ಎಸ್ ಆರ್ ಕಾಮತ ಹೇಳುತ್ತಾರೆ.

ಒಟ್ಟಿನಲ್ಲಿ ಬಕಾಸುರ‌ನ ಬಾಯಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತೆ ಘಟಪ್ರಭೆಯಿಂದ ಕೃಷ್ಣೆಗೆ ನೀರು ಹರಿಸುವ ಸರ್ಕಾರದ ಯತ್ನ‌ ವಿಫಲವಾಗಿದ್ದು ನೀರಲ್ಲಿ ಹೋಮ ಮಾಡುವ ಬದಲು ಹೊಮಕ್ಕೆ ನೀರು ಸುರಿದಂತಾಗಿದೆ ಅನ್ನೊದು ರೈತರ ಮಾತು ಹೀಗಾಗಿ ಕೂಡಲೇ ಮಹರಾಷ್ಟ್ರ ಕೊಯ್ನಾ ಜಲಾಶಯದಿಂದ 4 ಟಿಎಂಸಿ ನೀರು ಹರಿಸಬೇಕು ಅನ್ನೊದು ರೈತರ ಒತ್ತಾಯವಾಗಿದೆ

ವಿಸೂವಲ್ಸ್ 1 : ಹಿಡಿಕಲ ಜಲಾಶಯದ ನೀರು ಕೃಷ್ಣಾ ನದಿಗೆ ಬಾರದೆ ಬೇರೆ ಕಡೆ ಹೋಗುತ್ತಿರುವುದು

ವಿಸೂವಲ್ಸ್ 2 : ಕಿನಾಲ ಮೂಲಕ ಹೋಗ ಬೇಕಾದ ನೀರು ನಿಂತ ದೃಶ್ಯ

ವಿಸೂವಲ್ಸ್ 3 : ಹಿಡಕಲ ಜಲಾಶಯದಲ್ಲಿ ಇರುವ ನೀರು

ವಿಶೂವಲ್ಸ್ 4 : ಖಾಲಿ ಖಾಲಿ ಇರುವ ಕೃಷ್ಣಾ ನದಿ

ಬೈಟ್ 1 : ಎಸ್ ಆರ್ ಕಾಮತ, ಜೂನಿಯರ್ ಇಂಜಿನಿಯರ್ ಹಿಡ್ಕಲ ಜಲಾಶಯ

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.