ETV Bharat / state

ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತದೇಹದಲ್ಲಿ 1.5 ಕೆಜಿ ಬಂಗಾರ ಪತ್ತೆ

ಅವರಕೋಡ ಗ್ರಾಮದ ಕೃಷ್ಣಾ ನದಿಯಲ್ಲಿ ಮೃತದೇಹವೊಂದು ತೇಲಿಬಂದು ದಡಸೇರಿತ್ತು. ಸ್ಥಳಕ್ಕೆ ಬಂದ ಅಥಣಿ ಪೊಲೀಸರು ಪರಿಶೀಲನೆ ನಡೆಸಿ ಶವದ ಗುರುತು ಪತ್ತೆ ಮಾಡಿದ್ದು, ಮಹಾರಾಷ್ಟ್ರದ ಸಾಗರ ಪಾಟೀಲ (30) ಎಂದು ತಿಳಿಸಿದ್ದಾರೆ. ಮೃತದೇಹದ ಬಳಿ 1.5 ಕೆ.ಜಿ ತೂಕದ ಗಟ್ಟಿ ಬಂಗಾರ ಸಿಕ್ಕಿದೆ ಎಂದು ಅಥಣಿ ಡಿವೈಎಸ್ಪಿ ಎಸ್​​ವಿ ಗಿರೀಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ಧಾರೆ.

1.5 kg of gold found in dead body which came in Krishna River of athani
ಅಥಣಿ: ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತ ದೇಹದಲ್ಲಿ 1.5 ಕೆಜಿ ಬಂಗಾರ ಪತ್ತೆ
author img

By

Published : Oct 8, 2020, 10:51 AM IST

ಅಥಣಿ: ತಾಲೂಕಿನ ಅವರಕೋಡ ಗ್ರಾಮದ ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತದೇಹದಲ್ಲಿ 1.5 ಕೆಜಿ ಬಂಗಾರ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನದಿಯಲ್ಲಿ ತೇಲಿಬಂದ ಮೃತದೇಹ ಅವರಕೋಡ ಗ್ರಾಮದ ದಡದಲ್ಲಿ ಸಿಲುಕಿರುವದನ್ನು ಗಮನಿಸಿದ ಗ್ರಾಮಸ್ಥರು ಅಥಣಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಿರಜ ತಾಲೂಕಿನ ಪಾಟಗಾಂವ ಗ್ರಾಮದ ಸಾಗರ ಪಾಟೀಲ (30) ಎಂದು ಗುರುತಿಸಿದ್ದಾರೆ.

ಮೃತದೇಹದ ಬಳಿ 1.5 ಕೆಜಿ ತೂಕದ ಗಟ್ಟಿ ಬಂಗಾರ ಸಿಕ್ಕಿದೆ ಎಂದು ಅಥಣಿ ಡಿವೈಎಸ್ಪಿ ಎಸ್​​.ವಿ.ಗಿರೀಶ್ ಈಟಿವಿ ಭಾರತಕ್ಕೆ ತಿಳಿಸಿದರು. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಹಾಗೂ ಮೃತಪಟ್ಟ ವ್ಯಕ್ತಿಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.