ETV Bharat / state

ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್ : ಹೆಚ್​​ಡಿಕೆ ವಿರುದ್ಧ ಜಮೀರ್​​ ವಾಕ್​ಪ್ರಹಾರ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್. ದಿನದ 16 ಗಂಟೆ ಅವರ ಜೊತೆಗಿದ್ದವನು ನಾನು. ಅವರು ಲಾಭ ಇಲ್ಲದೆ ಏನೂ ಮಾಡುವುದಿಲ್ಲ. ಈಗ ಹಾನಗಲ್, ಸಿಂದಗಿಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಆರೋಪಿಸಿದ್ದಾರೆ.

ಹೆಚ್​​ಡಿಕೆ ವಿರುದ್ಧ ಜಮೀರ್​​ ವಾಕ್​ಪ್ರಹಾರ
ಹೆಚ್​​ಡಿಕೆ ವಿರುದ್ಧ ಜಮೀರ್​​ ವಾಕ್​ಪ್ರಹಾರ
author img

By

Published : Oct 17, 2021, 3:19 PM IST

ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

‘ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ದುಡಿದವರು ಸಿದ್ದರಾಮಯ್ಯ’

ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕದಲ್ಲಿ ಹಲವಾರು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಆದರೆ, ಈ ಪೈಕಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಾಡಿದಷ್ಟು ಕೆಲಸವನ್ನು ಯಾರೂ ಮಾಡಿಲ್ಲ. ಹೆಚ್​.ಡಿ. ಕುಮಾರಸ್ವಾಮಿ ಅವರೇ ಬಹಿರಂಗ ಚರ್ಚೆಗೆ ಬಂದರೆ ನಾನು ಈ ಬಗ್ಗೆ ಮಾತನಾಡಲು ಸಿದ್ಧನಿದ್ದೇನೆ ಎಂದು ಸವಾಲೆಸೆದಿದ್ದಾರೆ.

  • I take objection to @hd_kumaraswamy's statement about Shri @siddaramaiah carrying out political genocide of minorities.@hd_kumaraswamy should be conscious while using words like genocide (ನರಮೇಧ).

    HDK does not have control over his body language or his tongue.

    n/n

    — B Z Zameer Ahmed Khan (@BZZameerAhmedK) October 17, 2021 " class="align-text-top noRightClick twitterSection" data=" ">

‘ಅಲ್ಪಸಂಖ್ಯಾತರ ಬಜೆಟ್ ಇಳಿಸಿದ್ದು ಕುಮಾರಸ್ವಾಮಿ’

ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ಅಲ್ಪಸಂಖ್ಯಾತರ ಇಲಾಖೆಯ ಬಜೆಟ್ ಕೇವಲ 280 ಕೋಟಿ ರೂ. ಇತ್ತು. ಬಳಿಕ ಸಿದ್ದರಾಮಯ್ಯನವರು ಅದನ್ನು ರೂ.3,150 ಕೋಟಿಗೆ ಹೆಚ್ಚಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಈ ಬಜೆಟ್ ಅನುದಾನವನ್ನು ರೂ. 1800 ಕೋಟಿಗೆ ಇಳಿಸಿದ್ದರು. ಇದೇನಾ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ? ಎಂದು ಪ್ರಶ್ನಿಸಿದ್ದಾರೆ. ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರಲ್ಲ, ಕುಮಾರಸ್ವಾಮಿ. ಆ ವಿಧಾನ ಪರಿಷತ್ ಚುನಾವಣೆಯಲ್ಲಿ ಬೈರತಿ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಜೆಡಿಎಸ್ ಪಕ್ಷದಲ್ಲಿ ಆಗ ಏಳೆಂಟು ಹೆಚ್ಚುವರಿ ಮತಗಳಿದ್ದವು. ಅದನ್ನು ಬೈರತಿ ಸುರೇಶ್ ಅವರಿಗೆ ಮಾರಾಟ ಮಾಡಿದ್ದು ಯಾರೆಂದು ನೆನಪಿದೆಯಾ? ಎಂದು ಹೆಚ್​ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

ಮುಸ್ಲಿಂ ಅಭ್ಯರ್ಥಿ ವಿರುದ್ಧ ಮುಸ್ಲಿಂ ಅಭ್ಯರ್ಥಿಯನ್ನೇ ನಿಲ್ಲಿಸಿದ್ಯಾಕೆ?

ಯುಬಿ ಸಿಟಿಯ ನನ್ನ ಫ್ಲಾಟ್​​ನಲ್ಲಿ ನೀವಿದ್ದಾಗ ಆಗಿನ ಶಾಸಕ ಸುರೇಶ್ ಬಾಬು ಅವರು ಬೈರತಿ ಸುರೇಶ್ ಅವರನ್ನು ಕರೆದುಕೊಂಡು ಬಂದಿಲ್ಲವೇ? ಅಲ್ಲಿ ನಡೆದಿದ್ದ ಡೀಲ್ ಏನು? ಬೈರತಿ ಸುರೇಶ್ ಗೆಲ್ಲಿಸಿದರೆ ಅಲ್ಪಸಂಖ್ಯಾತರಿಗೆ ಸೇರಿರುವ ಸರಡಗಿ ಸೋಲುತ್ತಾರೆ ಎಂದು ನಿಮಗೆ ಗೊತ್ತಿರಲಿಲ್ಲವೇ ಕುಮಾರಸ್ವಾಮಿಯವರೇ? ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಜಾಫರ್ ಷರೀಫ್ ಮೊಮ್ಮಗ ಚುನಾವಣೆಗೆ ನಿಂತಾಗ ನೀವು ತಮ್ಮ ಪಕ್ಷದಿಂದ ಅಬ್ದುಲ್ ಅಜೀಂ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿಲ್ಲವೇ? ರೆಹಮಾನ್ ಷರೀಫ್ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಮುಸ್ಲಿಂ ಅಭ್ಯರ್ಥಿಯನ್ನು ಎದುರಾಳಿಯಾಗಿ ಯಾಕೆ ನಿಲ್ಲಿಸಿದ್ದು? ಎಂದು ಪ್ರಶ್ನಿಸಿದ್ದಾರೆ.

‘ಹಜ್ ಯಾತ್ರೆಗೆ ಒಮ್ಮೆಯೂ ಹೆಚ್​ಡಿಕೆ ಬಂದಿಲ್ಲ’

ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಚರಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬ್ಯಾಂಕ್ವೆಟ್ ಹಾಲ್​ನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನಿರಾಕರಿಸಿದ್ದರು. ನಾನು ಗಲಾಟೆ ಮಾಡಿ ಅಲ್ಲಿಯೇ ಸಮಾರಂಭ ನಡೆಸಿದಾಗ ಅವರು ಸಮಾರಂಭಕ್ಕೂ ಬರಲಿಲ್ಲ. ಹಜ್ ಯಾತ್ರೆ ಆರಂಭವಾದ ವರ್ಷದಿಂದ ಇಲ್ಲಿಯವರೆಗೆ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ ಸೇರಿದಂತೆ ಉಳಿದೆಲ್ಲ ಪಕ್ಷಗಳ ಮುಖ್ಯಮಂತ್ರಿಗಳು ಬಂದಿದ್ದರು. ಆದರೆ ಹೆಚ್​.ಡಿ. ಕುಮಾರಸ್ವಾಮಿ ಅವರು ಎಂದೂ ಬಂದಿಲ್ಲ.

‘ಬೇಡಿಕೊಂಡರೂ ಹಜ್ ಯಾತ್ರೆಗೆ ಕುಮಾರಸ್ವಾಮಿ ಬರಲಿಲ್ಲ’

ಇದು ಅವರ ಅಲ್ಪಸಂಖ್ಯಾತರ ಬಗೆಗಿನ ನೈಜ ಪ್ರೀತಿ. ನಮ್ಮ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದು ವರ್ಷವೂ ಹಜ್ ಯಾತ್ರೆಯ ಉದ್ಘಾಟನೆಗೆ ಬಂದಿದ್ದರು. ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಒಂದು ಗಳಿಗೆ ಬಂದು ಹೋಗಿ ಎಂದು ಬೇಡಿಕೊಂಡಿದ್ದೆ. ಆದರೂ ಕಾರ್ಯಕ್ರಮಕ್ಕೆ ಬಂದಿಲ್ಲ. ಈಗ ಯಾಕೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಬಂದಿದೆ? ವೋಟಿಗಾಗಿಯೇ? ಎಂದು ವ್ಯಂಗ್ಯವಾಡಿದ್ದಾರೆ.

‘ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್’

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್. ದಿನದ 16 ಗಂಟೆ ಅವರ ಜೊತೆಗಿದ್ದವನು ನಾನು. ಅವರು ಲಾಭ ಇಲ್ಲದೆ ಏನೂ ಮಾಡುವುದಿಲ್ಲ. ಈಗ ಹಾನಗಲ್, ಸಿಂದಗಿಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಇದೂ ಕೂಡ ಒಂದು ಡೀಲ್. ಬಸವಕಲ್ಯಾಣದಲ್ಲಿಯೂ ಹೆಚ್​ಡಿಕೆ ಅವರು ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದರು. ಆ ಅಭ್ಯರ್ಥಿ ದರ್ಗಾದ ಗುರುಗಳಾಗಿದ್ದ ಕಾರಣ 12,000 ಮತಗಳು ಬಂದಿದ್ದವು. ಅದರಿಂದ ಗೆದ್ದವರು ಯಾರು? ಬಿಜೆಪಿ ಅಭ್ಯರ್ಥಿ ಅಲ್ಲವೇ? ಇವರು ಬಿಜೆಪಿಯ (ಬಿ)ಟೀಮ್ ಎಂದು ಹೇಳಲು ಬೇರೆ ಪುರಾವೆ ಯಾಕೆ ಬೇಕು? ಎಂದು ಕುಹಕವಾಡಿದ್ದಾರೆ.

‘ಸಿ.ಎಂ.ಇಬ್ರಾಹಿಂ ಉಲ್ಟಾ ಹೊಡೆದಿದ್ದಾರೆ’

ಸಿ.ಎಂ.ಇಬ್ರಾಹಿಂ ಅವರು ಈಗಲೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ. ಮೊನ್ನೆ ಮೊನ್ನೆಯವರೆಗೆ ಅವರು ಸಿದ್ದರಾಮಯ್ಯ ಅವರನ್ನು ಹೊಗಳುತ್ತಾ, ಹೆಚ್.ಡಿ.ದೇವೇಗೌಡ ಮತ್ತು ಹೆಚ್​.ಡಿ.ಕುಮಾರಸ್ವಾಮಿ ಅವರನ್ನು ಬೈಯ್ಯುತ್ತಿದ್ದರು. ಈಗ ಪೂರ್ತಿ ಉಲ್ಟಾ ಹೊಡೆದಿದ್ದಾರೆ. ಆತ್ಮಾಭಿಮಾನ ಇದ್ದರೆ ಇಬ್ರಾಹಿಂ ಮೊದಲು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿ. 2004 ರಲ್ಲಿ ಸಿ.ಎಂ ಇಬ್ರಾಹಿಂ ಅವರು ತನ್ನನ್ನು ರಾಜ್ಯಸಭಾ ಸದಸ್ಯನಾಗಿ ಮಾಡುವಂತೆ ಹೆಚ್.ಡಿ.ದೇವೇಗೌಡ ರನ್ನು ಬೇಡಿಕೊಂಡಿದ್ದರು. ಯಾಕೆ ಅವರನ್ನು ರಾಜ್ಯಸಭೆಗೆ ಕಳಿಸಿಲ್ಲ? ಅವರ ಅವಕಾಶಕ್ಕೆ ಅಡ್ಡಗಾಲು ಹಾಕಿದವರು ಯಾರು? ಕಾಂಗ್ರೆಸ್ ಪಕ್ಷವೇ? ಸಿದ್ದರಾಮಯ್ಯನವರಾ? ಇಲ್ಲವೇ ಹೆಚ್​ಡಿಕೆನಾ? ಎಂದಿದ್ದಾರೆ.

‘ಇಬ್ರಾಹಿಂ ಸೋತರೂ ಅವಕಾಶ ಕೊಟ್ಟಿದ್ದು ಸಿದ್ದರಾಮಯ್ಯನವರು’

2013ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಂ.ಇಬ್ರಾಹಿಂ ಅವರಿಗೆ ಭದ್ರಾವತಿಯಲ್ಲಿ ಗೆಲ್ಲುವ ಅವಕಾಶವೇ ಇರಲಿಲ್ಲ. ಹಾಗಿದ್ದರೂ ಅವರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರು ಭದ್ರಾವತಿ ಕ್ಷೇತ್ರದ ಟಿಕೆಟ್ ನೀಡಿದರು. ಅಲ್ಲಿ ಸೋತು ಮೂರನೇ ಸ್ಥಾನಕ್ಕೆ ಹೋಗಿದ್ದರು. ಸೋತು ಹೋಗಿದ್ದ ಇಬ್ರಾಹಿಂ ಅವರನ್ನು ಸಿದ್ದರಾಮಯ್ಯ ಅವರು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಜೊತೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದರು. ಇಬ್ರಾಹಿಂ ಅವರಿಗೆ ಪಕ್ಷ ಮತ್ತು ಸಿದ್ದರಾಮಯ್ಯ ಇನ್ನೇನು ಮಾಡಬೇಕಾಗಿತ್ತು? ಜೆಡಿಎಸ್ ಪಕ್ಷದ ಹೆಚ್ಚಿನ ಶಾಸಕರು ಹಾಸನ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಸೇರಿದವರು. ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಇಷ್ಟೊಂದು ಕಾಳಜಿ ತೋರಿಸುವ ಹೆಚ್ಡಿಕೆ ಆ ಜಿಲ್ಲೆಗಳ ಯಾವುದಾದರೂ ಒಂದೆರಡು ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಯಾಕೆ ಟಿಕೆಟ್ ನೀಡಿ ಗೆಲ್ಲಿಸಬಾರದು? ಎಂದು ಪ್ರಶ್ನಿಸಿದ್ದಾರೆ.

‘ಫಾರೂಕ್​ಗೆ ಡಿಸಿಎಂ ಬಿಡಿ.. ಅವರನ್ನು ಮಂತ್ರಿಯಾಗಿಯೂ ಮಾಡಲಿಲ್ಲ’

ನಾನು ಮುಖ್ಯಮಂತ್ರಿಯಾದರೆ ಬಿ.ಎಂ. ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಗೃಹ ಖಾತೆ ನೀಡುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ 2018ರಲ್ಲಿ ಪ್ರಚಾರ ಭಾಷಣದಲ್ಲಿ ಭರವಸೆ ನೀಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಬಿಡಿ ಕೊನೆಗೆ ಮಂತ್ರಿಯೂ ಮಾಡಲಿಲ್ಲ. ಅವರನ್ನು ಬಳಸಿಕೊಂಡು ಬಿಸಾಡಿ ಬಿಟ್ಟರು. ರಾಜ್ಯ ಸಭಾ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇದ್ದಾಗ ಹೆಚ್ ಡಿ ದೇವೇಗೌಡ ಹಾಗೂು ಕಮಾರಸ್ವಾಮಿ ಸೇರಿಕೊಂಡು ರಾಮಸ್ವಾಮಿ, ವಿಜಯ್ ಮಲ್ಯ ಮತ್ತು ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿ ಗೆಲ್ಲಿಸಿದರು. ಸೋಲುವಾಗ ಫಾರುಕ್ ಅವರನ್ನು ನಿಲ್ಲಿಸಿ ಬಲಿಕೊಟ್ಟರು. ಇದಾ ನೀವು ಮುಸ್ಲಿಂ ನಾಯಕರನ್ನು ಬೆಳೆಸಿದ್ದು? ಎಂದು ಪ್ರಶ್ನಿಸಿದ್ದಾರೆ.

‘ಕಾಲ ಚಕ್ರ ತಿರುಗುತ್ತಿದೆ.. ನಿಮ್ಮ ಬಣ್ಣ ಬಯಲಾಗುತ್ತದೆ’

ರಾಜ್ಯಸಭಾ ಚುನಾವಣೆಯಲ್ಲಿ ಸೋತು ನನಗೆ ಅವಮಾನ ಆಗುತ್ತಿದೆ. ಮಂತ್ರಿಯನ್ನಾದರೂ ಮಾಡಿ ಎಂದು ಫಾರೂಕ್ ನಿಮ್ಮ ಬಳಿ ದಮ್ಮಯ್ಯ ಎಂದು ಕೇಳಿಕೊಂಡರು, ಹೋಗಲಿ ಅವರನ್ನು ಮಂತ್ರಿಯಾದ್ರೂ ಮಾಡಿದ್ರಾ ಕುಮಾರಸ್ವಾಮಿ ಅವರೇ? ನೀವು ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇಟ್ಟುಕೊಂಡಿರುವವರಾ? ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮುಸ್ಲಿಮರ ರಾಜಕೀಯ ನರಮೇಧ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನರಮೇಧದಂತಹ ಶಬ್ದ ಬಳಸುವಾಗ ಅವರು ಎಚ್ಚರಿಕೆಯಿಂದ ಇರಬೇಕಾಗಿತ್ತು. ಅವರಿಗೆ ಅವರ ನಡೆ-ನುಡಿಯ ಮೇಲೆ ಯಾವ ನಿಯಂತ್ರಣವೂ ಇಲ್ಲ. ಅಂತಹ ಶಬ್ದ ಬಳಕೆಯನ್ನು ನಾನು ಖಂಡಿಸುತ್ತೇನೆ. ನಿಜ, ಚಕ್ರ ತಿರುಗುತ್ತಿದೆ. ನಿಮ್ಮ ಒಂದೊಂದೇ ಬಣ್ಣ ಬಯಲಾಗಲು ಆರಂಭವಾಗಿದೆ. ಸಿದ್ದರಾಮಯ್ಯ ಅವರ ಬಗೆಗಿನ ಹೊಟ್ಟೆಕಿಚ್ಚಿನಿಂದ ಹಾಳಾಗುತ್ತಿರೋದು ನೀವೇ ಹೊರತು ಸಿದ್ದರಾಮಯ್ಯ ಅವರಲ್ಲ. "ಮನೆಯೊಳಗಣ ಕಿಚ್ಚು ಮನೆಯ ಸುಡುವುದಲ್ಲದೆ ನೆರೆಮನೆಯ ಸುಡದು ಕೂಡಲ ಸಂಗಮ ದೇವ" ಆಗಾಗ ಇದನ್ನು ಓದಿ ಹೆಚ್ಡಿಕೆ, ಸಾಧ್ಯವಾದರೆ ಬದಲಾಗಿ ಎಂದು ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.